ಬೆಂಗಳೂರು: ಕ್ಯಾಂಟರ್ ವಾಹನ ವ್ಯಾಪರದಲ್ಲಿ ಪರಿಚಯ ಆಗಿ ನಕಲಿ ನೋಟಿಗೆ ಆಸೆ ತೋರಿಸಿ ಲಕ್ಷ ಲಕ್ಷ ಹಣಕ್ಕೆ ಉಂಡೆನಾಮ ಇಟ್ಟಿದ್ದ ಗ್ಯಾಂಗ್ ಅನ್ನು ಕೆಜಿ ಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೆಜಿ ಹಳ್ಳಿ ನಿವಾಸಿ ರಂಗಸ್ವಾಮಯ್ಯಗೆ ನಟರಾಜ ಹೇಗೆ ಪರಿಚಯವಾಗಿ ಕಂಟೈನರ್ ಕೊಡಿಸುವ ವಿಚಾರಕ್ಕೆ ವ್ಯವಹಾರ ಮಾಡಿದ್ದರು. ಈ ಮಧ್ಯೆ ನಕಲಿ ನೋಟಿನ ಆಸೆ ತೋರಿಸಿ ಒನ್ ಟು ಡಬಲ್ ಮಾಡುವ ಆಸೆ ತೋರಿಸಿದ್ದರು. ಮೂಲೆಯಲ್ಲಿ ತುಂಬಿದ್ದ ಹಣದ ವಿಡಿಯೋ ಕಳುಹಿಸಿ ರಂಗಸ್ವಾಮಯ್ಯನನ್ನು ಎಮಾರಿಸಿದ್ದರು. ದಿಢೀರ್ ಶ್ರೀಮಂತನಾಗುವ ಕನಸು ಕಂಡರಂಗಸ್ವಾಮಿ ನಟರಾಜ ಹೇಳಿದ ಹೆಚ್‌ಬಿಆರ್ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ರಂಗಸ್ವಾಮಯ್ಯರನ್ನ ಕರೆಸಿಕೊಂಡಿತ್ತು. 8 ಲಕ್ಷ ರೂ. ಹಣದ ಸಮೇತ ಬಂದಿದ್ದ. ಇದೇ ಸಮಯಕ್ಕೆ ನಟರಾಜ ಉಳಿದ ಗ್ಯಾಂಗ್ ಪೊಲೀಸರ ರೀತಿ ಎಂಟ್ರಿ ಕೊಟ್ಟು ನಕಲಿ ನೋಟು ಮತ್ತು ಅಸಲಿ ನೋಟನ್ನು ಸೀಜ್ ಮಾಡೋ ನಾಟಕ ಆಡಿ ಹಣದ ಸಮೇತ ಪರಾರಿಯಾಗಿದ್ದರು. ಈ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಟರಾಜ ಸೇರಿದಂತೆ 4 ಮಂದಿಯನ್ನು ಬಂಧಿಸಿ 8 ಲಕ್ಷ ರೂ. ಜಪ್ತಿ ಮಾಡಿದ್ದಾರೆ.
ಆರೋಪಿಗಳು ಸದ್ಯ ಮಾಡಿದ ತಪ್ಪಿನಿಂದ ಜೈಲು ಸೇರಿದ್ದಾರೆ. ಆದರೆ ನಕಲಿ ನೋಟಿನ ಆಸೆಗೆ ಬೀಳುವ ಮುನ್ನ ಸ್ವಲ್ಪ ಯೋಚನೆ ಮಾಡೋದು ಒಳಿತು.
PublicNext
12/03/2022 10:28 pm