ಬೆಂಗಳೂರು: ಅಪ್ಘಾನಿಸ್ಥಾನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡಸಿ ಮೊಬೈಲ್ ರಾಬರಿ ಮಾಡಿರೋ ಘಟನೆ ಬೆಂಗಳೂರಿನ ಜ್ಞಾನ ಭಾರತಿಯಲ್ಲಿ ನಡೆದಿದೆ.
ಅಫ್ಘಾನ್ ವಿದ್ಯಾರ್ಥಿಗಳಿಗೆ ಚಾಕುವಿನಿಂದ ಕತ್ತು ,ಕೈಗೆ ಇರಿದು ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ತಡ ರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ.
ಬೆಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಲ್ಲೆಗಿಡಾಗಿದ್ದು, ಕಳೆದ ರಾತ್ರಿ ಮನೆ ಬಳಿ ನಡೆದುಕೊಂಡು ಹೋಗುವಾಗ ಎರಡು ಬೈಕ್ ನಲ್ಲಿ ಬಂದ ನಾಲ್ಕು ಮಂದಿ ಏಕಾಏಕಿ ಇರಿದು ಮೊಬೈಲ್ ರಾಬರಿ ಮಾಡಿದ್ದಾರೆ.
ಸದ್ಯ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
11/03/2022 03:00 pm