ಯಲಹಂಕ : ಬಡತನ, ಹೊಟ್ಟೆಪಾಡಿಗಾಗಿ ಕೆಲಸ ಹುಡುಕುತ್ತಿದ್ದ ಬಡ ಮಹಿಳೆಯರು ಮತ್ತು ಯುವತಿಯರೇ ಈ ಮಾನವ ಕಳ್ಳಸಾಗಾಣೆದಾರರ ಟಾರ್ಗೆಟ್ ಆಗಿತ್ತು. ಹೌದು ಈಶಾನ್ಯ ಭಾರತದ ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳ ಮಹಿಳೆಯರು ಮತ್ತು ಯುವತಿಯರನ್ನು ಕೆಲಸದ ಆಮಿಷ ತೋರಿಸಿ ಬೆಂಗಳೂರಿಗೆ ಕರೆತರುತ್ತಿದ್ದರು. ನಂತರ ವೇಶ್ಯಾವಾಟಿಕೆ ಅಡ್ಡೆಗಳಿಗೆ ಸಾಗಿಸಿ ಮಹಿಳೆಯರ ಶೋಷಣೆ ನಡೆಸುತ್ತಾ, ಅಧಿಕ ಹಣ ಗಳಿಸುತ್ತಿದ್ದರು.
ವೇಶ್ಯಾವಾಟಿಕೆ ಅಡ್ಡೆಯಿಂದ ತಪ್ಪಿಸಿಕೊಂಡು ಬಂದ ಯುವತಿ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಯುವತಿ ಮತ್ತು ಮಹಿಳೆಯನ್ನು ರಕ್ಷಿಸಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರ ದೊಡ್ಡಬೊಮ್ಮಸಂದ್ರದ ಜಯಕೃಷ್ಣಪ್ಪ ಬಡಾವಣೆಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ, ಪ್ರಮುಖ ಆರೋಪಿ ಮಧು ಎಂಬುವವನನ್ನ ಬಂಧಿಸಲಾಗಿದೆ.
ಈತನಿಗೆ ಈಶಾನ್ಯ ರಾಜ್ಯಗಳಿಂದ ಮಹಿಳೆಯರ ಸರಬರಾಜು ಮಾಡುತ್ತಿದ್ದ ಎರಡನೇ ಆರೋಪಿ- ರಫೀಕುಲ್ ಇಸ್ಲಾಂ, ಮೂರನೆ ಆರೋಪಿ ರುಬಿಲ್ ಮಂಡಲ್ ನನ್ನು ಬಂಧಿಸಲಾಗಿದೆ. ಈ ದುರುಳರ ವಶದಲ್ಲಿದ್ದ 35 ವರ್ಷದ ಮಹಿಳೆಯನ್ನು ರಕ್ಷಿಸಲಾಗಿದೆ. ITPA ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು ಮಾಂಸದಂಧೆಯ ಜಾಲದ ಬಗ್ಗೆ ಮತ್ತಷ್ಟು ತನಿಖೆ ತೀವ್ರಗೊಳಿಸಿದ್ದಾರೆ.
Kshetra Samachara
10/03/2022 10:46 pm