ಬೆಂಗಳೂರು: ಬೆಂಗಳೂರಿನಲ್ಲಿ ಚಿಲ್ಲರೆ ಅಂಗಡಿಯಲ್ಲಿ ಚಾಕೋಲೆಟ್, ಬಿಸ್ಕೆಟ್ ಪ್ಯಾಕ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ.ಒರಿಸ್ಸಾ ಮೂಲದ ವ್ಯಕ್ತಿ 5 ಗ್ರಾಂ 10 ಗ್ರಾಂ ಹಾಗೂ 20 ಗ್ರಾಂ ಲೆಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.
ಆರೋಪಿ ಪೊಲೀಸ್ರಿಗೆ ಅನುಮಾನ ಬಾರದಂತೆ ಚಾಕೋಲೇಟ್, ಬಿಸ್ಕೆಟ್, ಕಾಳುಗಳು ಸೇರಿದಂತೆ ದಿನ ಬಳಕೆ ವಸ್ತುಗಳ ಪಾಕೆಟ್ ಗಳಲ್ಲಿ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರನ್ನ ಟಾರ್ಗೆಟ್ ಮಾಡಿಕೊಂಡು ಗಾಂಜಾ ಸೇಲ್ ಮಾಡ್ತಿದ್ದ ಖಚಿತ ಮಾಹಿತಿ ಆಧರಿಸಿ ಆರೋಪಿಯ ಬಂಧನವಾಗಿದೆ.ಸದ್ಯ ಆರೋಪಿಯಿಂದ 8 ಲಕ್ಷ ಮೌಲ್ಯದ ಗಾಂಜಾ ಹಾಗೂ 65 ಸಾವಿರ ನಗದು ಸೀಜ್ ಮಾಡಿದ್ದಾರೆ.
Kshetra Samachara
10/03/2022 10:44 am