ಬೆಂಗಳೂರು: ಹುಡುಗಿ ವಿಚಾರಕ್ಕಾಗಿ ಇಬ್ಬರ ನಡುವೆ ನಿನ್ನೆ ತಡರಾತ್ರಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹಂತಕರನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಇಬ್ಬರು ಆರೋಪಿಗಳ ಕಾಲಿಗೆ ಪಿಎಸ್ಐಗಳು ಗುಂಡು ಹೊಡೆದಿದ್ದು ಪ್ರಕರಣದಲ್ಲಿ ಒಟ್ಟು ಐವರನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ಆರೋಪದಡಿ ಸೈಯದ್ ಮೋಹಿನ್, ಅದ್ನಾನ್ ಖಾನ್ ಗುಂಡೇಟು ತಿಂದರೆ, ಇನ್ನುಳಿದ ಆರೋಪಿಗಳಾದ ಅರ್ಬಾಜ್, ಮಜರ್, ಸೈಯದ್ ಸಾಕಿಬ್ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಕೆ.ಜಿ.ಹಳ್ಳಿ ನಿವಾಸಿ ಮೊಹಮ್ಮದ್ ಉಸ್ಮಾನ್ ಹಾಗೂ ಮೋಹಿನ್ ನಡುವೆ ಹುಡುಗಿ ವಿಚಾರಕ್ಕಾಗಿ ನಿನ್ನೆ ತಡರಾತ್ರಿ ಗಲಾಟೆಯಾಗಿ ಪರಸ್ಪರ ಕೈ-ಕೈ ಮಿಲಾಸಿಕೊಂಡಿದ್ದರು.
ಈ ವೇಳೆ ಮೊಹೀನ್ ಶಿವಾಜಿನಗರದಿಂದ ಹುಡುಗರನ್ನು ಕರೆಯಿಸಿ, ಉಸ್ಮಾನ್ ನ ಹತ್ಯೆ ಮಾಡಿಸಿ ಪರಾರಿಯಾಗಿದ್ರು. ಮಾಹಿತಿ ಪಡೆದು ಸ್ಥಳ ಪರಿಶೀಲಿಸಿದ್ದ ಪಿಎಸ್ಐ ಗಳಾದ ರೂಮಾನ್ ಮತ್ತು ಪಿಎಸ್ಐ ಆನಂದ್ ನೇತೃತ್ವದ ಹಂತಕರ ಪತ್ತೆಗೆ ಶೋಧಕಾರ್ಯಗಿಳಿದಿತ್ತು. ಇಂದು ಬೆಳಗಿವ ಜಾವ ಹಂತಕರ ಸುಳಿವು ಪಡೆದು ಮೋಹಿನ್ ಹಾಗೂ ಅದ್ನಾನ್ ಖಾನ್ ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಶರಣಾಗುವಂತೆ ಗಾಳಿಯಲ್ಲಿ ಗುಂಡು ಹೊಡೆದರೂ, ಬಗ್ಗದ ಆರೋಪಿಗಳ ಕಾಲಿಗೆ ಶೂಟ್ ಮಾಡಿ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.
ಇನ್ನು ತಲೆಮರೆಸಿಕೊಂಡಿದ್ದ ಮೂವರನ್ನ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
-ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
09/03/2022 01:51 pm