ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ತೋಪಿನಲ್ಲಿ ಗಾಂಜಾ ಮಾರಾಟ; ಯುವಕ ಸೆರೆ, ಸೊತ್ತು ವಶ

ನೆಲಮಂಗಲ: ನೆಲಮಂಗಲ ತಾಲ್ಲೂಕು ಶಿವಗಂಗೆ ಮೈದಾನದ ತೋಪಿನಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿ ಪಡೆದ ದಾಬಸ್ ಪೇಟೆ ಪೊಲೀಸರು ಓರ್ವ ಗಾಂಜಾ ಪೆಡ್ಲರ್ ನನ್ನು ಬಂಧಿಸಿದ್ದಾರೆ.

ಬೆಂಗಳೂರು ಬನಶಂಕರಿಯ ಮಧು (18 ) ಬಂಧಿತ ಆರೋಪಿ. ದಾಬಸ್ ಪೇಟೆ, ಶಿವಗಂಗೆ ಸುತ್ತಮುತ್ತಲಿನ ಗ್ರಾಮದ ಯುವಕರಿಗೆ ಮತ್ತು ಫ್ಯಾಕ್ಟರಿ ಕಾರ್ಮಿಕರಿಗೆ ಗಾಂಜಾ ಮಾರಾಟ ಮಾಡ್ತಿದ್ದ ಎನ್ನಲಾಗಿದೆ.

ಬಂಧಿತನಿಂದ 1 ಕೆ.ಜಿ. 300 ಗ್ರಾಮ್ ಗಾಂಜಾವನ್ನು ಜಪ್ತಿ ಮಾಡಿದ ಪೊಲೀಸ್ರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ಜೈಲಿಗಟ್ಟಿದ್ದಾರೆ.

Edited By : Shivu K
Kshetra Samachara

Kshetra Samachara

09/03/2022 12:51 pm

Cinque Terre

3.09 K

Cinque Terre

0

ಸಂಬಂಧಿತ ಸುದ್ದಿ