ದೊಡ್ಡಬಳ್ಳಾಪುರ : ಆಸ್ತಿ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳವಾಗಿ, ನನ್ನಿಂದ ಗಂಡ ದೂರವಾಗಲು ಪಕ್ಕದ್ಮನೆಯವರೇ ಕಾರಣರೆಂದು ಆಕ್ರೋಶಗೊಂಡ ಹೆಂಡತಿ ಪಕ್ಕದ್ಮನೆ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಲ್ಲೆಯನ್ನ ನಡೆಸಿದ್ದಾಳೆ.
ಹೌದು ದೊಡ್ಡಬಳ್ಳಾಪುರ ತಾಲೂಕಿನ ಮಲ್ಲೋಹಳ್ಳಿಯಲ್ಲಿ ಫೆ. 28 ರ ಬೆಳಗ್ಗೆ ಈ ಘಟನೆ ನಡೆದಿದ್ದು, ಮೇಲ್ಜಾತಿ ಸಮುದಾಯಕ್ಕೆ ಸೇರಿದ ಸುಧಾಮ್ಮ ಎಂಬುವರು ಕೆಳ ಸಮುದಾಯಕ್ಕೆ ಸೇರಿದ ಜಯಮ್ಮ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ವಾರವಾದ್ರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಹಲ್ಲೆಗೊಳಗಾದ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಮಲ್ಲೋಹಳ್ಳಿಯ ನಿವಾಸಿ ಸುಧಾಮ್ಮ ಎಂಬುವರು ಮುನಿರಾಜುರವರ ಎರಡನೇ ಹೆಂಡತಿ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಧಾಮ್ಮ ಮತ್ತು ಮುನಿರಾಜು ನಡುವೆ ಜಗಳ ನಡೆದು, ಮುನಿರಾಜು ಹೆಂಡತಿಯಿಂದ ದೂರವಾಗಿದ್ದ, ನನ್ನಿಂದ ಗಂಡ ದೂರವಾಗಲು ಜಯಮ್ಮ ಮತ್ತು ನಂಜಪ್ಪ ದಂಪತಿ ಕಾರಣರೆಂದು ತಿಳಿದ ಸುಧಾಮ್ಮ ಜಯಮ್ಮರವರ ಸೀರೆ ಬಿಚ್ಚಿ ಅದೇ ಸೀರೆಯಿಂದ ಗ್ರಾಮದ ಮಧ್ಯಭಾಗದಲ್ಲಿ ಹುಣಸೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆಂದು ಹಲ್ಲೆಗೊಳಗಾದ ಜಯಮ್ಮ ಆರೋಪ ಮಾಡಿದ್ದಾರೆ.
Kshetra Samachara
08/03/2022 12:25 pm