ಬೆಂಗಳೂರು: ನಿತ್ಯ ನಗರದಲ್ಲಿ ತರಹೆವಾರಿ ಡ್ರಗ್ಸ್ ಮತ್ತು ಗಾಂಜಾ ಪೆಡ್ಲರ್ ಗಳನ್ನು ಬೆಂಗಳೂರು ಪೊಲೀಸ್ರು ಪತ್ತೆ ಮಾಡ್ತಾನೆ ಇದ್ದಾರೆ. ಆದ್ರೂ ನಾಯಿಕೊಡೆಗಳಂತೆ ಈ ಗಾಂಜಾ ಪೆಡ್ಲರ್ ಗಳು ತಲೆ ಎತ್ತುತ್ತಲೆ ಇದ್ದಾರೆ. ಅದ್ರಲ್ಲೂ ಗಾಂಜಾದ ಮುಂದುವರಿದ ಭಾಗವಾಗಿ ಹ್ಯಾಶಿಸ್ ಆಯಿಲ್ ದಂಧೆ ನಗರದಲ್ಲಿ ಎಗ್ಗಿಲ್ಲದೆ ಸಾಗಿದೆ.
ಬೆಂಗಳೂರು ನಗರದಲ್ಲಿ ಇದೇ ಮೊಲದ ಬಾರಿಗೆ ದೊಡ್ಡ ಮಟ್ಟದ ಹ್ಯಾಶಿಸ್ ಆಯಿಲ್ ಸೀಜ್ ಮಾಡಿದ್ದಾರೆ.
ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಹುಳಿಮಾವು ಇನ್ಸ್ ಪೆಕ್ಟರ್ ಚಂದ್ರಕಾಂತ್ ಆ್ಯಂಡ್ ಟೀಂ ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ 13 ಕೆ.ಜಿ.ಹ್ಯಾಶಿಸ್ ಆಯಿಲ್ ಸೀಜ್ ಮಾಡಿದ್ದಾರೆ.
ಇತ್ತೀಚೆಗೆ ಡ್ರಗ್ಸ್ ದಂಧೆ ಮಾಡುತ್ತಿರುವ ಬಗ್ಗೆ ಇಬ್ಬರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದರು. ಇವರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ವಿಶ್ವಂ, ಸಿಗಿಲ್ ಹಾಗೂ ಯುವತಿ ವಿಷ್ಣುಪ್ರಿಯ ಎಂಬುವರನ್ನು ಬಂಧಿಸಲಾಗಿದೆ.
ಆಂಧ್ರದ ವಿಶಾಖಪಟ್ಟಣದಿಂದ ಹ್ಯಾಶ್ ಆಯಿಲ್ ತರಿಸಿಕೊಂಡು ಗ್ರಾಂ ಗೆ ನಾಲ್ಕರಿಂದ ಐದುಸಾವಿರಕ್ಕೆ ಮಾರಾಟ ಮಾಡಿ ಕೋಟಿ ಕೋಟಿ ಹಣ ಮಾಡ್ತಿದ್ದ ಪೆಡ್ಲರ್ಸ್ ಗಳನ್ನ ಗಂಟುಮೂಟೆ ಸಮೇತ ಸದ್ಯ ಹುಳಿಮಾವು ಪೊಲೀಸ್ರು ಜೈಲಿಗಟ್ಟಿದ್ದಾರೆ.
-ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
08/03/2022 09:29 am