ಬೆಂಗಳೂರು: ಮನೆ ಮಾಲೀಕನ ಮಗ ಆಟ ಆಡೋಕೆ ಆಗಾಗ ಟೆರಸ್ ಗೆ ಬರ್ತಿದ್ದ.ಬಂದವನೆ ಮನೆಯಲ್ಲಿ ದುಡ್ಡಿದೆ.ದುಡ್ಡಿದೆ ಅಂತಿದ್ದ. ಅಷ್ಟೇ ಇದನ್ನೆ ಪ್ಲಸ್ ಪಾಯಿಂಟ್ ಮಾಡಿಕೊಂಡ ಅಕ್ಕ-ತಂಗಿ ಖತರ್ನಾಕ್ ಪ್ಲಾನ್ ಮಾಡಿ, ಮಾಲೀಕರು ಹೊರ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದನ್ನ ಗುಡಿಸಿ ಗುಂಡಾಂತರ ಮಾಡಿಬಿಟ್ಟಿದ್ರು.
ಕಂತೆ ಕಂತೆ ನೋಟು,ಬಂಗಾರದೊಡವೆ,ಬೆಳ್ಳಿ ಸಾಮಾನುಗಳು. ಇವೆಲ್ಲವನ್ನೂ ಬಾಡಿಗೆ ಮನೆಯ ಓನರ್ ಮನೆಯಲ್ಲಿ ದೋಚಿದ್ದು.
ಹಗಲು ರಾತ್ರಿ ದುಡಿದ ಲಾರಿಯನ್ನ ಮಗಳ ಮದುವೆಗೆ ಮಾರಿ ಇಷ್ಟೆಲ್ಲ ಹಣ,ಒಡವೆ ತಂದು ಮನೆಯಲ್ಲಿಟ್ಟಿದ್ರು.ಆದರೆ, ಮೋಜು-ಮಸ್ತಿ ಮಾಡೋಕೆ ಅಂತಾನೆ ಹುಟ್ಟಿದ್ದ ಈ ಚಾಲಾಕಿ ಅಕ್ಕ- ತಂಗಿತರು ಕೈಚಳಕ ತೋರಿ ಮನೆ ಓನರ್ ಗೆ ಶಾಕ್ ನೀಡಿದ್ರು
ಸದ್ಯ ಪೊಲೀಸರ ಅತಿಥಿಯಾಗಿರೊ ಈ ಖತರ್ನಾಕ್‌ಗಳ ಹೆಸರು ಸುಮಯ್ಯ ತಾಜ್,ನಾಜೀಮಾ ತಾಜ್ ಮತ್ತು ನಾಜೀಮಾ ತಾಜ್ ನ ಪತಿ ಅಕ್ಬರ್ ವಯಸ್ಸು 38 ವರ್ಷ.ಸುಮಯ್ಯ ನಾಜೀಯ ದಯಾನಂದ ನಗರದ ಎದುಬದುರು ಮನೆಯಲ್ಲಿದ್ರು.
ಮೊದಲ ಮಹಡಿಯಲ್ಲಿ ಮನೆ ಮಾಲೀಕ ಜಬಿ ಹಾಗೂ ಹಾಜಿರಾ ದಂಪತಿ ಜೊತೆಗೆ ಕಾಲೇಜಿಗೆ ಹೋಗೊ ಹೆಣ್ಣು ಮಗಳು ಹಾಗೂ 13 ವರ್ಷದ ಮಗ ವಾಸವಿದ್ರು.
ಫೆಬ್ರವರಿ 19 ಜಬಿ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದ.ಮಗಳು ಕಾಲೇಜಿಗೆ ಹೋಗಿದ್ಳು.13 ವರ್ಷದ ಮಗ ಮತ್ತದೇ ಟೆರಸ್ ಮೇಲೆ ಆಟವಾಡಿಕೊಳ್ತಿದ್ದ.ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಬಂಧಿಯೊಬ್ಬರನ್ನು ನೋಡಲು ಆಸ್ಪತ್ರೆಗೆ ಹಾಜಿರಾ ತೆರಳಿದ್ದಾಳೆ.ಈ ವೇಳೆ ಆತ್ಮೀಯಳಂತೆ ಮುಖ್ಯ ರಸ್ತೆವರೆಗೂ ಮಾತಾಡಿಸಿಕೊಂಡು ಬಂದಿದ್ದ ನಾಜೀಮಾ,ತಾನು ಕೂಡ ಹೊರಗೆ ಹೋಗ್ತಿದ್ದಿನಿ ಎಂದು ಮುಖ್ಯ ರಸ್ತೆವರೆಗೂ ಬಂದು, ಹಾಜಿರಾ ಆಟೋ ಹತ್ತಾ ಇದ್ದಂತೆ ಮತ್ತೆ ಮನೆಗೆ ವಾಪಸ್ ಆಗಿದ್ದಾಳೆ.ಬಂದವಳೇ ನಕಲಿ ಕೀ ಬಳಸಿ ಮನೆ ಒಳಗೆ ತಂಗಿ ಸುಮಯ್ಯಾ ತಾಜ್ ಹಾಗೂ ಅಕ್ಬರ್ ರಾಡ್ ನಿಂದ ಬೀರು ಮೀಟಿ 2.34 ಲಕ್ಷ ಮೌಲ್ಯದ 58 ಗ್ರಾಂ ಚಿನ್ನಾಭರಣ,10 ಲಕ್ಷ ನಗದು ಹಣ ಕದ್ದು ಪರಾರಿಯಾಗಿದ್ದಾರೆ.
ಮನೆ ಮಾಲೀಕರು ಸಂಜೆ ಮನೆಗೆ ಬಂದಾಗ ವಿಷಯ ತಿಳಿದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗ್ತಿದ್ದಂತೆ, ಕಳ್ಳರು ಇವರೇ ಅನ್ನೋದನ್ನ ಪತ್ತೆ ಹಚ್ಚಿದ್ದು,ಆರೋಪಿಗಳನ್ನು ಬಂಧಿಸಿ,ಬಂಧಿತರಿಂದ 4 ಲಕ್ಷ ನಗದು,2.79 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆದಿದ್ದಾರೆ. ಇನ್ನೂ ಇದೆ ಸುಮಯ್ಯ ಹಾಗೂ ನಾಜೀಮಾ ಕದ್ದ ದುಡ್ಡಲ್ಲಿ ಶೋಕಿ ಮಾಡಿದ್ದಾರೆ.
PublicNext
07/03/2022 08:00 am