ಬೆಂಗಳೂರು: ಆನ್‌ಲೈನ್‌ನಲ್ಲೇ ಡೀಲ್ ಮಾಡಿ ಮುಖ ನೋಡದೇ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಅಪ್ ಗ್ರೇಡೆಡ್ ಪೆಡ್ಲರ್ ಕೆ.ಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಟೆಕ್ಕಿಗಳು ವಿದ್ಯಾರ್ಥಿಗಳಿಗೆ ಎಂಡಿಎಂಎ ಸರಬರಾಜು ಮಾಡುತ್ತಿದ್ದ. ದಕ್ಷಿಣ ಆಫ್ರಿಕಾ ಮೂಲದ ನೆಲ್ಸನ್ ಬಂಧಿತ ಆರೋಪಿ ವಾಟ್ಸ್ಆಪ್ ಮತ್ತು ಮೆಸೆಂಜರ್ ಕಾಲ್ ಮೂಲಕ ಡ್ರಗ್ ಡೀಲ್ ಮಾಡ್ತಿದ್ದ. ಆನ್‌ಲೈನ್ ಪೇಮೆಂಟ್ ಮಾಡ್ಕೊಂಡು ಅವರು ಹೇಳಿದ ಹತ್ತಿರದ ಲೊಕೇಶನ್‌ಗೆ ಹೋಗಿ ಡ್ರಗ್ ಇಡ್ತಿದ್ದ.
ನಿರ್ಜನ ಪ್ರದೇಶದಲ್ಲಿ ಡ್ರಗ್ಸ್ ತಂದಿಟ್ಟು ಲೊಕೇಶನ್ ಮತ್ತು ಫೋಟೋ, ವೀಡಿಯೋವನ್ನ ಕಸ್ಟಮರ್‌ಗೆ ಶೇರ್ ಮಾಡಿ ಅಪ್ಡೇಟ್ ಮಾಡ್ತಿದ್ದ . ಹೀಗೆ ಅಪ್ಡೇಟ್ ಆಗಿ ಡ್ರಗ್ ಡೀಲ್ ಮಾಡ್ತಿದ್ದ ಆಸಾಮಿಯನ್ನ ಕೆ.ಜೆ ಹಳ್ಳಿ ಇನ್ಸ್ಪೆಕ್ಟರ್ ಸಂತೋಷ್ ಹಾಗೂ ಟೀಂ ಹೆಡೆಮುರಿ ಕಟ್ಟಿ 25 ಲಕ್ಷ ರೂ ಮೌಲ್ಯದ ಎಂಡಿಎಂಎ ನಶೆ ಸೀಜ್ ಮಾಡಿದ್ದಾರೆ.
PublicNext
06/03/2022 05:26 pm