ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಸಿಸ್ಟರ್' ಅಂತ ಸ್ಟಾರ್ಟ್ ಮಾಡಿ ನಗ್ನ ವೀಡಿಯೊ ಕಳ್ಸಿ ಚಾಟ್!; ಸೈಕೋ ಮಂಜ ಕೊನೆಗೂ ಅರೆಸ್ಟ್

ಬೆಂಗಳೂರು: ವಾಟ್ಸ್ ಆ್ಯಪ್ ನಲ್ಲಿ ಅನೌನ್ ನಂಬರ್ ಗೆ ರಿಪ್ಲೈ ಮಾಡೋ ಮೊದಲು ಜೋಕೆ...! 'ಸಿಸ್ಟರ್' ಅಂತ ಚಾಟ್ ಸ್ಟಾರ್ಟ್ ಮಾಡಿ ಅಶ್ಲೀಲ ವೀಡಿಯೊ ಕಳ್ಸಿ ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಸೈಕೋ ಮಂಜ ಈಗ ಅರೆಸ್ಟ್ ಆಗಿದ್ದಾನೆ.

ಮೂರು ಜಿಲ್ಲೆಗಳಲ್ಲಿ ವಕೀಲರ ಸಹಿತ ಹಲವು ಸಾರ್ವಜನಿಕರಿಗೆ ಇದೇ ರೀತಿ ಮೊಬೈಲ್ ನಂಬರ್ ಪಡೆದು ಅಶ್ಲೀಲ ಚಾಟ್ ಮಾಡಿದ್ದ ಕುರಿತು ದೂರು ಕೂಡ ದಾಖಲಾಗಿತ್ತು. ಆದ್ರೆ, ಪೊಲೀಸ್ರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಈ ಸೈಕೋ, ಈ ಟೈಮ್ ನಲ್ಲಿ ಪೊಲೀಸ್ರಿಗೆ ಫೋನ್ ನಲ್ಲಿ ಆವಾಜ್ ಕೂಡ ಹಾಕಿದ್ದ!

ಹಲಸೂರು ಗೇಟ್ ಮತ್ತು ವಿದ್ಯಾರಣ್ಯಪುರದಲ್ಲಿಯೂ ಮಂಜನ‌ ಮೇಲೆ ಕೇಸ್ ಇದ್ದು ಅವ್ರೂ ಕೂಡ ಈತನ ಹಿಂದೆ ಬಿದ್ದಿದ್ರು. ಆದ್ರೆ, ಎಲ್ರಿಗೂ ಚಳ್ಳೆ ಹಣ್ಣು ತಿನ್ನಿಸಿದ್ದ ಮಂಜ ಕೊನೆಗೆ ಕಾಮಕ್ಷಿಪಾಳ್ಯ ಪೊಲೀಸ್ರಿಗೆ ಲಾಕ್ ಆಗಿದ್ದಾನೆ.

ಗೃಹಿಣಿಯೊಬ್ರ ನಂಬರ್ ಪಡೆದು ಚಾಟ್ ಮಾಡಿದ್ದ ಖತರ್ನಾಕ್ ಮಂಜ, ಈ ವಿಚಾರ ಯಾರಿಗಾದರೂ ಹೇಳಿದ್ರೆ ನಿನ್ನ ಗಂಡನನ್ನ ಕೊಲೆ ಮಾಡುವುದಾಗಿ ಬೆದರಿಸಿದ್ದ. ಈ ಬಗ್ಗೆ ಕಾಮಕ್ಷಿಪಾಳ್ಯ ಠಾಣೆಗೆ ಗೃಹಿಣಿ ದೂರು ನೀಡಿದ್ರು. ಕಾಮಕ್ಷಿಪಾಳ್ಯ ಪೊಲೀಸ್ರಿಗೂ ಚಾಲೆಂಜ್ ಹಾಕಿದ್ದ ಮಂಜನ ಪತ್ತೆಗೆ ಇನ್ಸ್ ಪೆಕ್ಟರ್ ಪ್ರಶಾಂತ್, ಪಿಎಸ್ ಐ ಶರೀಫ್ ಕ್ರೈಂ ಟೀಮ್ ರಚಿಸಿ, ಕೊನೆಗೂ ಸೈಕೋನನ್ನು ಒಳಗೆ ಹಾಕಿದ್ದಾರೆ.

ಇನ್ನು, ಈ ಮಂಜ ಕದ್ದ ಮೊಬೈಲ್ ನಲ್ಲಿ ಮಹಿಳೆಯರ ನಂಬರ್ ಗೆ ಕರೆ ಮಾಡಿ ಮಾತನಾಡಿ, ನಂತರ ಸಿಮ್ ಬಿಸಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಶ್ರೀನಿವಾಸ್ ಚಂದ್ರ,

ಕ್ರೈಂ ಬ್ಯೂರೋ 'ಪಬ್ಲಿಕ್ ನೆಕ್ಸ್ಟ್'

Edited By : Manjunath H D
PublicNext

PublicNext

05/03/2022 04:22 pm

Cinque Terre

35.44 K

Cinque Terre

1

ಸಂಬಂಧಿತ ಸುದ್ದಿ