ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಕಲಿ ಬಿರ್ಲಾ ಪುಟ್ಟಿ ಫ್ಯಾಕ್ಟರಿ ಮೇಲೆ‌ ಸಿಸಿಬಿ ದಾಳಿ

ಬೆಂಗಳೂರು: ಮನೆ ಕಟ್ಟಡ ಸಾಮಗ್ರಿಗಳನ್ನ ನಕಲು ಮಾಡೋ ದೊಡ್ಡ ಜಾಲ ಬೆಂಗಳೂರಿನಲ್ಲಿ ತಲೆ ಎತ್ತಿದೆ. ಸದ್ಯ ಇದರಲ್ಲಿ ಒಂದು ಫ್ಯಾಕ್ಟರಿ ಮೇಲೆ ಸಿಸಿಬಿ ದಾಳಿ ನಡೆಸಿದೆ. ಪ್ರತಿಷ್ಟಿತ ಬಿರ್ಲಾ ಕಂಪನಿಯ ವಾಲ್ ಕೇರ್ ಪುಟ್ಟಿಯ ಹೆಸರಿನಲ್ಲಿ ನಕಲಿ ಪುಟ್ಟಿ ತಯಾರು ಮಾಡುತ್ತಿದ್ದ ಘಟಕದ ಮೇಲೆ ಸಿಸಿಬಿ ದಾಳಿ ನಡೆಸಿದೆ.

ದಾಳಿಯಲ್ಲಿ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ವಾಲ್ ಕೇರ್‌ ಪುಟ್ಟಿ ಸೀಜ್ ಮಾಡಲಾಗಿದ್ದು, ಬಿರ್ಲಾ ಹೆಸರಿದ್ದ 800 ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ. ‌ಇನ್ನೂ ನಕಲಿ ಫ್ಯಾಕ್ಟರಿ ನಡೆಸುತ್ತಿದ್ದ ಮಾಲೀಕ ತಲೆ ಮರೆಸಿಕೊಂಡಿದ್ದಾನೆ. ಈ ಸಂಬಂಧ ನಗರದ ಪರಪ್ಪನಾಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

05/03/2022 03:40 pm

Cinque Terre

738

Cinque Terre

0

ಸಂಬಂಧಿತ ಸುದ್ದಿ