ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಲೇಜಿನಿಂದ ಡಿಬಾರ್ ಆಗಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ?

ಬೆಂಗಳೂರು: ಕಾಲೇಜಿನಲ್ಲಿ ಡಿಬಾರ್ ಮಾಡಿದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಜೆ.ಬಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

21 ವರ್ಷದ ಭವ್ಯ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು, ಲೇಡಿಸ್ ಪಿಜಿ ಕಟ್ಟಡ ಐದನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಕೋರಮಂಗಲ ಜ್ಯೋತಿ ನಿವಾಸ್ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಭವ್ಯ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಆದರೆ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದಾಳೆಂದು ಕಾಲೇಜು ಆಡಳಿತ ಮಂಡಳಿ ಆಕೆಯನ್ನು ಡಿಬಾರ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನನ್ನನ್ನು ಕಾಲೇಜ್‌ನಲ್ಲಿ ಡಿಬಾರ್ ಮಾಡಿದ್ದಾರೆ. ಹೀಗಾಗಿ ಬದುಕೋದಿಲ್ಲ ಎಂದು ತನ್ನ ಸಹೋದರಿ ದಿವ್ಯಾಗೆ ಕೊನೆಯಾದಗಿ ಕರೆ ಮಾಡಿದ್ದ ಭವ್ಯ ಆತ್ಮಹತ್ಯೆಗೆ ಮುಂದಾಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಈ ವಿಚಾರವನ್ನು ದಿವ್ಯಾ ತನ್ನ ತಂದೆಗೆ ತಿಳಿಸಿ ಪೋಷಕರು ಕಾಲೇಜು ಬಳಿ ಹೋಗುವಷ್ಟರಲ್ಲಿ ದುರ್ಘಟನೆ ನಡೆದಿದೆ‌. ಪೋಷಕರು ಕಾಲೇಜು ಬಳಿ ಹೋಗುವ ಮೊದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ಭವ್ಯ ಪೋಷಕರಿಗೆ ಕರೆ ಮಾಡಿ‌ ತಿಳಿಸಿದ್ದಾರೆ. ಇನ್ನು ಘಟನೆ ಸಂಬಂಧ ಜೀವನ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Edited By : Manjunath H D
PublicNext

PublicNext

05/03/2022 12:36 pm

Cinque Terre

31.74 K

Cinque Terre

0

ಸಂಬಂಧಿತ ಸುದ್ದಿ