ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಪಲಕ್ಕೆ 70 ರ ವಯಸ್ಸಲ್ಲಿ ಕಳ್ಳನಾದ ತಾತ

ಬೆಂಗಳೂರು: ವಯಸ್ಸು 70‌ ಇನ್ನೇನೂ ಜೀವನದ ಕೊನೆ ಗಳಿಗೆ ಲೆಕ್ಕಹಾಕುವ ಕಾಲ. ಈ ವಯಸ್ಸಲ್ಲಿ ಎರಡು ಮದುವೆಯಾಗಿದ್ರು ಪರಸ್ತ್ರಿ ವ್ಯಾಮೋಹ ಬಿಟ್ಟಿರಲಿಲ್ಲ. ಈ ಮುದುಕಪ್ಪನ ಪರಮ ಚಪಲದ ಆಟಕ್ಕೆ, ಮನೆಯವರು ಬೇಸತ್ತು ಮನೆಯಿಂದ ಹೊರಗೆ ಹಾಕಿದ್ರು ಬುದ್ದಿ ಕಲಿತಿರಲಿಲ್ಲ. ಮುದಿ ವಯಸ್ಸಲ್ಲಿ ಮೊಮ್ಮಕ್ಕಳ ಜೊತೆ ಆಟ ಆಡಬೇಕಿದ್ದ ಈ ತಾತ ಸದ್ಯ ಜೈಲು ಸೇರಿದ್ದಾನೆ.

ಈತನ ಹೆಸ್ರು ರಮೇಶ ಅಂತ. ವೇಶ್ಯೆಯರ ಸಹವಾಸಕ್ಕೆ ಬಿದ್ದು ಕಳ್ಳತನ ಮಾಡುತ್ತಿದ್ದ ಈ ಮುದುಕನನ್ನ, ಸುದ್ದಗುಂಟೆಪಾಳ್ಯ ಪೊಲೀಸ್ರು ಬಂಧಿಸಿದ್ದಾರೆ. ಕಳ್ಳತನ ಕೇಸ್ ಒಂದರಲ್ಲಿ ಈತನನ್ನ ಬಂಧಿಸಿ ಪೊಲೀಸ್ರು ಪರಿಶೀಲಿಸಿದಾಗ, ತಮಿಳುನಾಡಿನಲ್ಲಿ ಈತನ ಮೇಲೆ ಏಳು ಪ್ರಕರಣಗಳು ಇರುವುದು ಗೊತ್ತಾಗಿದೆ.

ರಮೇಶ್ ಮೂಲತ ಚಿಕ್ಕಮಗಳೂರು ಮೂಲದವನು, ಒಂದಲ್ಲ ಅಂತ ಎರಡು ಮದುವೆಯಾಗಿದ್ದಾನೆ. ಮೂರು ಮಕ್ಕಳು ಇದ್ದಾರೆ. ಆದರೆ, ಈತನ ಚಪಲಕ್ಕೆ ಮಾತ್ರ ಕೊನೆಯಿರಲಿಲ್ಲ. ಇದೇ ವಿಚಾರವಾಗಿ ಮನೆಯವರು ಈತನನ್ನ ಎರಡು ವರ್ಷಗಳ ಹಿಂದೆ ಮನೆಯಿಂದ ಹೊರಗೆ ಹಾಕಿದ್ದಾರೆ. ತಮಿಳುನಾಡಿನಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ವೇಶ್ಯೆಯರ ಸಹವಾಸ ಮಾಡುತ್ತಿದ್ದ. ಹೀಗೆ ಮುದುಕಪ್ಪ ರಮೇಶನ ಮೇಲೆ ತಮಿಳುನಾಡಿನಲ್ಲಿ ಬರೋಬ್ಬರಿ ಏಳು ಕೇಸುಗಳಿವೆ. ಆದರೆ ಇತ್ತೀಚಿಗೆ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದ ರಮೇಶ್, ಬೆಂಗಳೂರಿಗೆ ಬಂದು ಸುದ್ದಗುಂಟೆಪಾಳ್ಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ರಮೇಶ್ ನನ್ನ ಸದ್ಯ ಪೊಲೀಸ್ರು ಬಂಧಿಸಿದಾಗ ಈತನ ಆಸಲಿಯತ್ತು ಬೆಳಕಿಗೆ ಬಂದಿದ್ದು, ಬಂಧಿತನಿಂದ 300 ಗ್ರಾಂ ಚಿನ್ನವನ್ನು ರಿಕವರಿ ಮಾಡಿದ್ದಾರೆ.

ಶ್ರೀನಿವಾಸ್ ಚಂದ್ರ,ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By : Manjunath H D
PublicNext

PublicNext

05/03/2022 10:01 am

Cinque Terre

42.44 K

Cinque Terre

1

ಸಂಬಂಧಿತ ಸುದ್ದಿ