ಬೆಂಗಳೂರು: ಹೈಫೈ ಏರಿಯಾದಲ್ಲಿ ಐಷಾರಾಮಿ ಕಾರು ಕಳ್ಳತನ ಮಾಡಲು ಹೋಗಿದ್ದವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕಾರು ಕಳ್ಳತನದ ವೇಳೆ ಮಾಲೀಕನಿಗೆ ಚಾಕು ತೋರಿಸಿ ಬೆದರಿಸಿದ್ದ ಇಬ್ಬರು ಖದೀಮರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಸದಾಶಿವನಗರದ 10ನೇ ಅಡ್ಡರಸ್ತೆಯ ಅಪಾರ್ಟ್‌ಮೆಂಟ್ ವೊಂದರಲ್ಲಿ ಮುನಿರಾಜು ಎಂಬುವರ ಕಾರು ಕಳ್ಳತನಕ್ಕೆ ಯತ್ನಿಸಿದ ಆರೋಪದಡಿ ಸಲ್ಮಾನ್ ಮತ್ತು ಮೆಹಬೂಬ್ ನವಾಜ್ ನನ್ನ ಪೊಲೀಸರು ಬಂಧಿಸಿದ್ದಾರೆ.
ಕಳೆದ ಫೆ. 27ರಂದು ಪಲ್ಸರ್ ಬೈಕ್‌ನಲ್ಲಿ ತೆರಳಿದ್ದ ಆರೋಪಿಗಳು ಸೆಲ್ಲರ್‌ನಲ್ಲಿ ಪಾರ್ಕ್ ಮಾಡಿದ್ದ ಹೈ-ಫೈ ಕಾರಿನ ಗಾಜು ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದರು. ಈ ವೇಳೆ ಮಾಲೀಕ ಮುನಿರಾಜು ನೋಡಿ ಅಲ್ಲೇ ಅವಿತುಕೊಂಡು ಕೂಗಾಡಿದ್ದಾರೆ. ಇದನ್ನು ಗಮನಿಸಿದ ಖದೀಮರು ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದರು. ಆಗ ಮುನಿರಾಜು ಕೂಗಾಟ ಕೇಳಿ ಅಕ್ಕಪಕ್ಕದವರು ಸಹಾಯಕ್ಕೆ ಬಂದಿದ್ದರು. ಜನರು ಸೇರುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಲು ಯತ್ನಿಸಿ ಸಿಕ್ಕಿಬಿದ್ದಿದ್ದರು.
ಸಲ್ಮಾನ್ ವಿರುದ್ಧ ಕೊಲೆ, ಕೊಲೆಯತ್ನ, ಕಿಡ್ನಾಪ್, ರಾಬರಿ ಪ್ರಕರಣ ಸೇರಿದಂತೆ 11 ಪ್ರಕರಣ ದಾಖಲಾಗಿವೆ. ಮತ್ತೋರ್ವ ಆರೋಪಿ ಮೆಹಬೂಬ್ ಉಮೇರ್ ಕೂಡ ರೌಡಿ ಶೀಟರ್ ಆಗಿದ್ದಾನೆ.
Kshetra Samachara
03/03/2022 09:02 pm