ಬೆಂಗಳೂರು: ಎಸಿಬಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ದಾಳಿ ಇದಾಗಿದ್ದು, ಕಳೆದ ಮೂರು ದಿನಗಳಿಂದ ಎಸಿಬಿಯಿಂದ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿಕಾರ್ಯ ಮುಂದುವರಿದಿದೆ. ಬಿಬಿಎಂಪಿಯಲ್ಲಿ 2 ಸಾವಿರ ಕೋಟಿ ರೂ.ಗೂ ಅಧಿಕ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ.
ಮೂರನೇ ದಿನವೂ ಎಸಿಬಿ ಅಧಿಕಾರಿಗಳು ಕೆದಕಿದಷ್ಟು ಬಿಬಿಎಂಪಿಯ ಭ್ರಷ್ಟಾಚಾರ ಬಯಲಾಗುತ್ತಿದೆ.ಇಂದು 33 ಕಡೆ ಬಿಬಿಎಂಪಿ ಕಚೇರಿಗಳಲ್ಲಿ ಪರಿಶೀಲನೆ ನಡೆಸಿರುವ ಎಸಿಬಿ ಅಧಿಕಾರಿಗಳು, ಜಾಹೀರಾತು, ಟಿಡಿಆರ್, ನಗರ ಯೋಜನೆ, ಕಂದಾಯ ಹಾಗೂ ಸ್ಟಾರ್ಮ್ ವಾಟರ್ ಡ್ರೈನೇಜ್ ವಿಭಾಗಗಳ ಕೋಟಿ ಕೋಟಿ ವಂಚನೆ ನಡೆಸಿರುವುದನ್ನು ಪತ್ತೆ ಹಚ್ಚಿದ್ದಾರೆ.
ಜಾಹೀರಾತು ವಿಭಾಗವೊಂದರಲ್ಲೇ 300 ಕೋಟಿ ರೂ.ಗೂ ಅಕ್ರಮ ಪತ್ತೆಯಾಗಿದೆ. ಸ್ಟಾರ್ಮ್ ವಾಟರ್ ಡ್ರೈನೇಜ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ 1 ಲಕ್ಷ 18 ಸಾವಿರ ರೂ. ದಾಖಲೆಗಳಿಲ್ಲದ ಹಣ ಪತ್ತೆಯಾಗಿದ್ದು, ಸ್ಟಾರ್ಮ್ ಡ್ರೈನೇಜ್ ವಿಭಾಗದ 1,050 ಕೋಟಿ ರೂ. ಟೆಂಡರ್ ಸಂಬಂಧ ಎಸಿಬಿ ಅಧಿಕಾರಿಗಳು ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.
ಕಂದಾಯ ವಿಭಾಗದಲ್ಲಿ ಇಂದು ಮತ್ತೆ 217 ಕೋಟಿ ಆಕ್ರಮ ಪತ್ತೆಯಾಗಿದ್ದು,ಮೊನ್ನೆಯಷ್ಟೆ 500 ಕೋಟಿಗೂ ಅಧಿಕ ಆಕ್ರಮ ಪತ್ತೆಯಾಗಿತ್ತು.ಸದ್ಯ ಕಳೆದ ಮೂರುದಿನಗಳಿಂದ ದಾಳಿ ನಡೆಸುತ್ತಿರುವ ಎಸಿಬಿ ಇಂದಿಗೆ ಅಂತ್ಯ ಗೊಳಿಸಿದೆ. ಇನ್ನು ಎಸಿಬಿ ದಾಳಿ ನಂತರ ಟ್ಯಾಕ್ಸ್ ಬಾಕಿ ಉಳಿಸಿಕೊಂಡಿದ್ದ ಉದ್ಯಮಿಗಳು 3ದಿನದಲ್ಲಿ 15 ಕೋಟಿ ಟ್ಯಾಕ್ಸ್ ಪಾವತಿಸಿದ್ದಾರೆ.
Kshetra Samachara
02/03/2022 10:44 pm