ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದರೋಡೆಕೋರರ ದರ್ಬಾರ್ : ದೂರು ದಾಖಲು

ನೆಲಮಂಗಲ : ಬೆಂಗಳೂರು ಉತ್ತರ ತಾಲೂಕಿನ ಬಿಳಿಜಾಜಿ ಗ್ರಾಮದ ರಾಜೀವ್ ಗಾಂಧಿ ವಸತಿ ಸಮುಚ್ಚಯ ಕಾಮಗಾರಿ ನಿರ್ಮಾಣ ಜಾಗದಲ್ಲಿ ದರೋಡೆ ನಡೆದಿದೆ.

ಸುಮಾರು 10-15 ದುಷ್ಕರ್ಮಿಗಳ ಗುಂಪೊಂದು ಸೆಕ್ಯುರಿಟಿ ಸಿಬ್ಬಂದಿ ಹಾಗೂ ಲಾರಿ ಚಾಲಕರನ್ನು ದೊಣ್ಣೆ, ಚಾಕು ಮತ್ತು ರಾಡ್ ತೋರಿಸಿ ಬೆದರಿಸಿ ರೂಂನಲ್ಲಿ ಕೂಡಿ ಹಾಕಿ ಸುಮಾರು 5 ಲಕ್ಷ ಮೌಲ್ಯದ ಕಟ್ಟಡ ಸಾಮಗ್ರಿಗಳು, 5 ಮೊಬೈಲ್ ಸೇರಿದಂತೆ 8 ಸಾವಿರ ನಗದು ಎಗರಿಸಿ ಎಸ್ಕೇಪ್ ಆಗಿದ್ದಾರೆ.

ವಿಷಯ ತಿಳಿದು ಕಂಪನಿ ಮ್ಯಾನೇಜರ್ ಶಿವು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Edited By : Shivu K
Kshetra Samachara

Kshetra Samachara

01/03/2022 05:30 pm

Cinque Terre

2.34 K

Cinque Terre

0

ಸಂಬಂಧಿತ ಸುದ್ದಿ