ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಿವರಾತ್ರಿಗೆ ಗಾಂಜಾ ಸೇಲ್ ಜಾಸ್ತಿ ಅಂತೆ; ಗಾಂಜಾ ಭಕ್ತರಿಗಿಟ್ಟ ಮಾಲು ಪೊಲೀಸ್ರ ವಶಕ್ಕೆ

ಬೆಂಗಳೂರು: ನಾಡಿನೆಲ್ಲೆಡೆ ನಾಳೆ‌ ಮಹಾಶಿವರಾತ್ರಿಯ ಸಂಭ್ರಮ, ಶಿವಭಕ್ತರು ದೇವಸ್ಥಾನದಲ್ಲಿ ಪೂಜೆ ಪುನಃಸ್ಕಾರಕ್ಕೆ ಪ್ಲಾನ್ ಮಾಡ್ತಿದ್ರೆ, ಗಾಂಜಾ ಬಪೆಡ್ಲರ್‌ಗಳು ಮಾತ್ರ ಬೇರೆಯದ್ದೆ ಪ್ಲಾನ್ ಮಾಡಿದ್ರು. ಅಂದ್ಹಾಗೆ ಈ ಗಾಂಜಾ ಬ್ಯುಸಿನೆಸ್ ನಲ್ಲಿ ಶಿವರಾತ್ರಿ ದಿನವೇ ಹೆಚ್ಚು ಗಾಂಜಾ ಸೇಲ್ ಆಗುತ್ತಂತೆ.‌ಹೀಗಂತ ಖುದ್ದ ಗಾಂಜಾ ಪೆಡ್ಲರ್ ಒಬ್ಬ ಪೊಲೀಸ್ರ ಮುಂದೆ ಬಾಯಿ ಬಿಟ್ಟಿದ್ದಾನೆ.

ಇದೇ ಕಾರಣ ನಗರದಲ್ಲಿ ನೆರೆ ರಾಜ್ಯದಿಂದ‌ ಗಾಂಜಾ ತಂದು ದಾಸ್ತಾನು ಮಾಡಿದ್ದ ವೇಳೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ರಿಗೆ ಲಾಕ್ ಆಗಿದ್ದಾನೆ. ಗಾಂಜಾ ತಂದು ಪೊದೆಗಳಲ್ಲಿ ಬಚ್ಚಿಟ್ಟು, ಶಿವರಾತ್ರಿ ದಿನ ಭರ್ಜರಿ ಸೇಲ್‌ಗೆ ಪ್ಲಾನ್ ಮಾಡಿದ್ದ ಗಾಂಜಾ ಪೆಡ್ಲರ್ ಹೀಗೆ ಹೇಳಿ ಇನ್ಸ್ಪೆಕ್ಟರ್ ಲೋಹಿತ್ ಶಾಕ್ ನೀಡಿದ್ದಾರೆ.

ಹಿಂದೆ ಬಂಧಿತರಾಗಿದ್ದ ಗಾಂಜಾ ಮಾರಾಟಗಾರರ ಮಾಹಿತಿ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ರು ದೂರದ ಆಂಧ್ರದಲ್ಲು ಪೆಡ್ಲರ್ ಕೇಶವ್ ರಾಮ್‌ ಲಾಕ್ ಆಗಿದ್ದ.ನಾಳೆ ಹಬ್ಬದ ಹಿನ್ನೆಲೆ ಕೇಶವ್ ರಾಮ್ ಅನ್ನಪೂರ್ಣೇಶ್ವರಿ ನಗರದಲ್ಲಿ 65 ಕೆ.ಜಿ.ಗಾಂಜಾ ವನ್ನು ಪೊದೆಯಲ್ಲಿಟ್ಟು ಸೇಲ್ ಮಾಡಲು ಪ್ಲಾನ್ ಮಾಡಿದ್ರು‌.

ಗಾಂಜಾ ಕೇಸ್ ನಲ್ಲಿ ಕಳೆದ ಫೆಬ್ರವರಿ‌ 18 ರಂದು ನಾಲ್ವರ ಬಂಧನವಾಗಿತ್ತು. ಇದೇ ವಿಚಾರ ವೇಳೆ ಕೇಶವ್ ರಾಮ್ ಹೆಸರು ಹೇಳಿದ್ತು. ವಿಚಾರಣೆ ಮುಂದುವರಿಸಿದಾಗ ಮತ್ತಷ್ಟು ಗಾಂಜಾ ಸೀಜ್ ಆಗಿದೆ.

Edited By : Shivu K
PublicNext

PublicNext

28/02/2022 03:55 pm

Cinque Terre

19.75 K

Cinque Terre

2

ಸಂಬಂಧಿತ ಸುದ್ದಿ