ಬೆಂಗಳೂರು: ಆತ ನೋಡೋಕೆ ಪೊಲೀಸ್ ರೀತಿ ಕಾಣಲ್ಲ ಆದ್ರೂ ಪೊಲೀಸರ ರೀತಿ ಕಟ್ಟಿಂಗ್ ಶೇವಿಂಗ್ ಮಾಡ್ಸಿ ಥೇಟ್ ಪೊಲೀಸರ ಸೋಗಿನಲ್ಲಿ ಜನರನ್ನ ಏಮಾರಿಸುತ್ತಿದ್ದ. ಹೌದು ಬೆಳಗ್ಗೆ ಟೀ ಮಾರ್ತಿದ್ದ ಇವ್ನು ಮಧ್ಯಾಹ್ನ ಆಗ್ತಿದ್ದಂತೆ ಪೊಲೀಸ್ ಅಂತ ಮಾರ್ಕೇಟ್ ನಲ್ಲಿ ಅಂಗಡಿ ಮುಂದೆ ಹೋಗಿ ಹಣ ವಸೂಲಿ ಮಾಡ್ತಿದ್ದ.
ಈತನನ್ನು ನಿಜವಾದ ಕಾಪ್ ಎಂದು ನಂಬಿದ್ದ ಅಂಗಡಿಯವರು ಹೆದರಿ ಇವನೂ ಬಂದಾಗೆಲ್ಲ 50, 100 ಕೈಗಿಟ್ಟು ಕಳುಹಿಸುತ್ತಿದ್ರು.ಕ್ರಮೇಣ ಈತನ ನಡವಳಿಕೆ ಬಗ್ಗೆ ಅನುಮಾನ ಬಂದ ಸ್ಥಳೀಯರು ಈ ವಿಚಾರವನ್ನ ಸಿಟಿ ಮಾರ್ಕೆಟ್ ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯ ಸಿಟಿ ಮಾರ್ಕೆಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಂದ ಹಣವಸೂಲಿ ಮಾಡೋ ಟೈಂ ನಲ್ಲೇ ನಕಲಿ ಪೊಲೀಸ್ ನ ಲಾಕ್ ಮಾಡಿದ್ದಾರೆ.
ಶ್ರೀರಾಮಪುರದ ವಾಸಿಯಾಗಿರೋ ವಿಘ್ನೇಶ್ ಬಂಧಿತ ಆರೋಪಿಯಾಗಿದ್ದು, ಬೆಳಗಿನ ಜಾವ ಮಾರ್ಕೆಟ್ ಸುತ್ತಾಮುತ್ತಾ ಟೀ ಮಾರುತ್ತಿದ್ದ ವಿಘ್ನೇಶ್ ವ್ಯಾಪಾರಸ್ಥರಿಂದ ಪೊಲೀಸ್ ಸಿಬ್ಬಂದಿ ಎಂದು ಹೆದರಿಸಿ ಹಣವಸೂಲಿ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಎಲ್ಲಿ ತನಕ ನಾವು ಯಾಮರ್ತೇವೋ ಅಲ್ಲಿವರೆಗೂ ಯಾಮರಿಸುವವರು ಇದ್ದೇ ಇರುತ್ತಾರೆ ಅನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.
Kshetra Samachara
25/02/2022 12:45 pm