ನೆಲಮಂಗಲ : ಮದುವೆ ಆಗದ ವಿಚಾರಕ್ಕೆ ಮನನೊಂದ ಯುವತಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡ ಘಟನೆ ಬೆಂ.ಉತ್ತರ ತಾಲ್ಲೂಕು ಚಿಕ್ಕಬಿದರಕಲ್ಲು ಗ್ರಾಮದಲ್ಲಿ ನಡೆದಿದೆ.
ಚಂದನಾ 24 ವರ್ಷ ಮೃತ ಯುವತಿ. ಚಂದನಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ತನಗೆ ಹಾಗೂ ತನ್ನ ಹಿರಿಯ ಸಹೋದರಿಗೆ ಇದುವರೆಗೆ ಮದುವೆಯಾಗಿಲ್ಲ ಎಂಬ ವಿಚಾರಕ್ಕೆ ಮನನೊಂದು ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
24/02/2022 07:01 pm