ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಿನ್ನದಂಗಡಿ ಗೋಡೆಗೆ ರಂಧ್ರ ಕೊರೆದು ಚಿನ್ನಾಭರಣ ದೋಚಿದ ಕಳ್ಳರು

ಬೆಂಗಳೂರು: ಚಿನ್ನದಂಗಡಿಯ ಗೋಡೆಯಲ್ಲಿ ರಂಧ್ರ ಕೊರೆದು ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಸಾರಾಯಿ ಪಾಳ್ಯದಲ್ಲಿ ನಡೆದಿದೆ.ಡ್ರಿಲ್ಲಿಂಗ್ ಮೆಷಿನ್ ಬಳಸಿ ಗೋಡೆ ಕೊರೆದ ಖದೀಮರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಸಾರಾಯಿಪಾಳ್ಯದ ಶ್ರೀ ರಾಘವೇಂದ್ರ ಜ್ಯುವೆಲ್ಲರಿ ಶಾಪ್‌ಗೆ ತಡರಾತ್ರಿ ಗೋಡೆ ಕೊರೆದು‌ ಸುಮಾರು 1 ಕೆ.ಜಿ.ಚಿನ್ನಾಭರಣ ಕದ್ದಿದ್ದಾರೆಂದು ಆರೋಪಿಸಲಾಗಿದೆ‌. ತಮ್ಮ ಗುರುತು ಪೊಲೀಸರಿಗೆ‌ ಸಿಗದಿರಲು ಕಳ್ಳತನ ಮಾಡಿ ಹೋಗುವಾಗ ಅಂಗಡಿಯಲ್ಲಿದ್ದ ಸಿಸಿಟಿವಿಯ ಡಿವಿಆರ್ ಅನ್ನು ಕಳ್ಳರು ಹೊತ್ತೊಯ್ದಿದ್ದಾರೆ.‌ ಇಂದು ಬೆಳಗ್ಗೆ ಎಂದಿನಂತೆ ಮಾಲೀಕರು ಅಂಗಡಿ ತೆರೆಯಲು ಬಂದಾಗ ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಹೆಣ್ಣೂರು ಠಾಣೆ ‌ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿ ಚಾಲಾಕಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

Edited By : Shivu K
Kshetra Samachara

Kshetra Samachara

24/02/2022 02:07 pm

Cinque Terre

2.44 K

Cinque Terre

0

ಸಂಬಂಧಿತ ಸುದ್ದಿ