ಬೆಂಗಳೂರು: ಹದಿಹರಯೆದ ವಯಸ್ಸಲ್ಲಿ ಹುಡುಗಿ ವಿಚಾರಕ್ಕೆ ಗಲಾಟೆ ಆಗೋದು, ಕೊಲೆ ಆಗೋದು ಕಾಮನ್. ಆದರೆ, ನಿನ್ನೆ ನಗರದ ಡಿಜೆ ಹಳ್ಳಿ ಜಂಕ್ಷನ್ ನಲ್ಲಿ ಮಂಗಳಮುಖಿ ವಿಚಾರಕ್ಕೆ ಗಲಾಟೆ ನಡೆದಿದೆ.
ಹೌದು. ಡಿಜೆ ಹಳ್ಳಿಯ ಸ್ಯಾಮುಯೆಲ್ ಕೆಲ ತೃತಿಯಲಿಂಗಿಗಳ ಜೊತೆ ಲಿವಿಂಗ್ ಟು ಗೆದರ್ ನಲ್ಲಿದ್ದ. ಈ ವಿಚಾರಕ್ಕೆ ಸ್ನೇಹಿತ ಪ್ರವೀಣ್ ಜೊತೆ ಆಗಾಗ ಕಿರಿಕ್ ಆಗ್ತಿತ್ತು. ಸ್ಯಾಮುಯೆಲ್ ತೃತಿಯಲಿಂಗಿ ಜೊತೆ ಇರೋ ವೀಡಿಯೋವನ್ನ ಸ್ಯಾಮುಯೆಲ್ ಸ್ನೇಹಿತರಿಗೆ ತೋರಿಸಿ ಪ್ರವೀಣ್ ಬ್ಲಾಕ್ ಮೇಲ್ ಮಾಡ್ತಿದ್ದ. ಇದೇ ಕಾರಣಕ್ಕೆ ಸ್ಯಾಮುಯೆಲ್ ನಿನ್ನೆ ತಡ ರಾತ್ರಿ ಡ್ರಾಗರ್ ಹಿಡಿದು ಸ್ನೇಹಿತ ಪ್ರವೀಣ್ ಹಲ್ಲೆಗೆ ಮುಂದಾಗಿದ್ದ.
ಈ ವೇಳೆ ಕುಡಿದ ಅಮಲಿನಲ್ಲಿ ಸ್ಯಾಮುಯೆಲ್ ಮೇಲೆ ಪ್ರವೀಣ್ ಮತ್ತು ಸುರೇಶ್ ತಿರುಗಿ ಬಿದ್ದಿದ್ರು. ಲಾಂಗಿನಿಂದ ಸ್ಯಾಮುಯೆಲ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ರು.
ಇತ್ತ ಪ್ರಕರಣ ದಾಖಲಾಗ್ತಿದ್ದಂತೆ ಡಿಜೆ ಹಳ್ಳಿ ಪೊಲೀಸ್ರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿರೋ ಸ್ಯಾಮುಯೆಲ್ ಚಿಕಿತ್ಸೆ ಪಡೆದುಕೊಳ್ಳಿತ್ತಿದ್ದಾನೆ.
PublicNext
22/02/2022 01:16 pm