ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ನಕಲಿ ನಂದಿನಿ ತುಪ್ಪ ಅಡ್ಡೆ ಮೇಲೆ ದಾಳಿ,ರಾಜಸ್ಥಾನ ಮೂಲದ ವ್ಯಕ್ತಿ ಬಂಧನ

ನೆಲಮಂಗಲ: ನಕಲಿ ನಂದಿನಿ ತುಪ್ಪ ತಯಾರಿಸುತ್ತಿದ್ದ ತುಪ್ಪದ ಅಡ್ಡೆ ಮೇಲೆ ಕೆಎಂಎಫ್ ಅಧಿಕಾರಿಗಳೊಂದಿಗೆ ಮಾದನಾಯಕನಹಳ್ಳಿ ಪೊಲೀಸರು ದಾಳಿ ಮಾಡಿರುವ ಘಟನೆ ಬೆಂ.ಉತ್ತರ ತಾಲ್ಲೂಕು ಬೈಯಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆಎಂಎಫ್ ಜಾಗೃತಿ ದಳದ ಅಶೋಕ್, ಜಯರಾಮ್, ಡಿ ಸುರೇಶ್ ತಂಡದೊಂದಿಗೆ,

ನೆಲಮಂಗಲ ಉಪವಿಭಾಗ ಡಿವೈಎಸ್ಪಿ ಗೌತಮ್, ಮಾದನಾಯಕನಹಳ್ಳಿ ಸಿಪಿಐ ಮಂಜುನಾಥ್ ದಾಳಿ ಮಾಡಿ

ರಾಜಸ್ಥಾನ ಮೂಲದ ಬಾಬು ಲಾಲ್ (40 ) ಎಂಬುವವನನ್ನು ಬಂಧಿಸಲಾಗಿದೆ.

ಈತ ಬಟ್ಟೆ ವ್ಯಾಪಾರ ಮಾಡ್ತಿದ್ದ, ನಂತರ ಬಿಸಿನೆಸ್ ಅಲ್ಲಿ ಲಾಸ್ ಆದ ಪರಿಣಾಮ ನಕಲಿ ತುಪ್ಪ ತಯಾರಿಕೆಗೆ ಇಳಿದಿದ್ದ.ಈತನಿಂದ ತುಪ್ಪ, ಸ್ಟೌವ್, 2 ಸಿಲಿಂಡರ್ ಸೇರಿದಂತೆ ಸುಮಾರು 15 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಎಂಎಫ್ ಅಧಿಕಾರಿಗಳ ತಂಡ ಮತ್ತು ಪೊಲೀಸ್ರು ನಕಲಿ ನಂದಿನಿ ತುಪ್ಪದ ಜಾಲ ಪತ್ತೆಗಾಗಿ ತೀವ್ರ ತನಿಖೆಗೆ ಒತ್ತಾಯಿಸುತ್ತಿದ್ದು

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
Kshetra Samachara

Kshetra Samachara

17/02/2022 03:42 pm

Cinque Terre

2.6 K

Cinque Terre

0

ಸಂಬಂಧಿತ ಸುದ್ದಿ