ಬೆಂಗಳೂರು: ರಾಜ್ಯಕ್ಕೆ ಕಳ್ಳ ದಾರಿಯಲ್ಲಿ ಬರೋ ಡ್ರಗ್ಸ್ ಮೇಲೆ ಪೊಲೀಸ್ರು ಹದ್ದಿನ ಕಣ್ಣಿಟ್ಟಿದ್ದಾರೆ. ಬ್ರೆಜಿಲ್ ನಿಂದ ಯವತಿಯರು ಸಣ್ಣ ಸಣ್ಣ ಪ್ಯಾಕ್ ನಲ್ಲಿ ಕೊಕೈನ್ ತಂದು ರಾಜ್ಯದಲ್ಲಿ ಮಾರಾಟ ಮಾಡ್ತಿದ್ದ ಆರೋಪಿಗಳನ್ನು ಗೋವಿಂದಪುರ ಪೋಲಿಸ್ರು ಬಂಧಿಸಿದ್ದಾರೆ.
ಕಳ್ಳ ದಾರಿಯಲ್ಲಿ ರಾಜ್ಯಕ್ಕೆ ಬಂದ ಒಂದು ಕೋಟಿ 36 ಲಕ್ಷ ಮೌಲ್ಯದ 910 ಗ್ರಾಮ್ ಕೊಕೈನ್ ಸೀಜ್ ಮಾಡಿದ್ದಾರೆ. ಈ ಹೈ ಎಂಡ್ ಡ್ರಗ್ಸ್ ವಿದೇಶಿ ಪ್ರಜೆಗಳಿಗೆ ಹಾಗೂ ಸೆಲೆಬ್ರಿಟೆಗಳಿಗೆ ಮಾರಾಟ ಮಾಡ್ತಿದ್ರು ಎನ್ನಲಾಗ್ತಿದೆ.
ಇನ್ನೂ ಪೊಲೀಸ್ರು ಡ್ರಗ್ಸ್ ಪೆಡ್ಲರ್ ರೀತಿ ಕಾರ್ಯಾಚರಣೆ ನಡೆಸಿ ಮಧ್ಯಪ್ರದೇಶದ ವರೂಡಿನಲ್ಲಿ ಮೈನ್ ಪೆಡ್ಲರ್ ನಿಂದ ಒಂದು ಕೋಟಿ ಇಪ್ಪತ್ತು ಲಕ್ಷ ಬೆಲೆಯ ಬ್ರೌನ್ ಶುಗರ್ ಸೀಜ್ ಮಾಡಿದ್ದಾರೆ. ಕಳೆದ ಬಾರಿ ಸಿಕ್ಕ ಗಾಂಜಾ ಪೆಡ್ಲರ್ ಗಳಿಂದ ಸಿಕ್ಕ ಮಾಹಿತಿ ಮೇಲೆ ಕಾರ್ಯಚರಣೆ ನಡೆಸಿದ ಇನ್ಸ್ಪೆಕ್ಟರ್ ಪ್ರಕಾಶ್ ಆ್ಯಂಡ್ ಟೀಮ್ ಕಾರ್ಯಾರಣೆಗೆ ಕಮಿಷನರ್ ಕಮಲ್ ಪಂತ್ ಪ್ರಶಂಸಿಸಿ ನಗದು ಬಹುಮಾನ ಘೋಷಿಸಿದರು.
ಶ್ರೀನಿವಾಸ್ ಚಂದ್ರ ಕ್ರೈಂಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
15/02/2022 06:43 pm