ಬೆಂಗಳೂರು: ಕಳೆದ 6ನೇ ತಾರೀಖು ಡಾಲರ್ಸ್ ಕಾಲೋನಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆಯ ಪತ್ನಿಯ ಮೊಬೈಲ್ ಕಿತ್ತು ಪರಾರಿಯಾಗಿದ್ದ ಗ್ಯಾಂಗ್ ಕೊನೆಗೂ ಅಂದರ್ ಆಗಿದೆ. ಆದ್ರೆ ಡಾಲರ್ಸ್ ಕಾಲೋನಿಯಲ್ಲಿ ಕದ್ದ ಮೊಬೈಲ್‌ಅನ್ನು ಆರೋಪಿಗಳು ಪಾದರಾಯನಪುರದಲ್ಲಿ ಮಾರಾಟ ಮಾಡಿದ್ದಾಗಿ ತಿಳಿದು ಬಂದಿದೆ.
ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಅವರ ಮೊಬೈಲ್ ಫೋನ್ ಕಸಿದು ಆರೋಪಿಗಳು ಎಸ್ಕೇಪ್ ಆಗಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ ಪೊಲೀಸರು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಜಬೀ , ಅಸ್ಲಾಂ , ಮೊಹೀನ್, ಶೇಕ್ ಇಲಿಯಾಸ್ ಜೊತೆಗೆ ಮತ್ತೊಬ್ಬ ಆರೋಪಿಯನ್ನ ಬಂಧಿಸಿ ಒಟ್ಟು 30ಪ್ರಕರಣಗಳನ್ನ ಪೊಲೀಸರು ಭೇದಿಸಿದ್ದಾರೆ. ಇನ್ನು ಶಾಸಕರ ಪತ್ನಿಯ ಮೊಬೈಲ್ ಸ್ನಾಚ್ ಮಾಡಿದ್ದ ಮೊಯಿನ್ ಪಾದರಾಯನಪುರ ಅಸ್ಲಂ ಎಂಬಾತನಿಗೆ ಕದ್ದ ಮೊಬೈಲ್‌ಗಳನ್ನ ಮಾರುತ್ತಿದ್ದ ಎಂದು ಹೇಳಲಾಗ್ತಿದೆ. ಅಸ್ಲಂ ಮೊಯಿನ್, ಜಬಿ ಸೇರಿದಂತೆ ಸಾಕಷ್ಟು ಹುಡುಗರನ್ನ ಮೊಬೈಲ್ ಸ್ನಾಚ್ ಮಾಡಲು ಮುಂಗಡ ಹಣ ಕೊಟ್ಟು ಇಟ್ಟುಕೊಂಡಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಹಾಗೂ ಹೆಚ್.ಆರ್.ಎಸ್ ಲೇಔಟ್ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು ಮೊಬೈಲ್ ಸ್ನಾಚ್ ಮಾಡಲು ಈ ಗ್ಯಾಂಗ್ ಕದ್ದ ಬೈಕ್ ಹಾಗೂ ನಕಲಿ ನಂಬರ್ ಪ್ಲೇಟ್ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
PublicNext
15/02/2022 10:27 am