ಆನೇಕಲ್: ಲಂಚಮುಕ್ತ ಕರ್ನಾಟಕ ಅಭಿಯಾನ ಮತ್ತು ಜನಜಾಗೃತಿಯನ್ನು ಕಾರ್ಯಕ್ರಮವನ್ನು ಇಂದು ಆನೇಕಲ್ ತಹಶೀಲ್ದಾರ್ ಕಚೇರಿ ಮುಂಭಾಗ ಕರ್ನಾಟಕ ರಾಷ್ಟ್ರೀಯ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದರು.
ಇನ್ನು ತಹಶೀಲ್ದಾರ್ ಕಚೇರಿಗೆ ಬರುವ ಸಾರ್ವಜನಿಕರಿಗೆ ಕೆಆರ್ಎಸ್ ಪಕ್ಷದಿಂದ ಜನಜಾಗೃತಿಯನ್ನು ಮೂಡಿಸಲಾಯಿತು ಮತ್ತು ಮಧ್ಯವರ್ತಿ ಹಾವಳಿ ಮತ್ತು ಅಧಿಕಾರಿಗಳು ಶಾಮೀಲು ಬಗ್ಗೆ ಜನರಿಗೆ ಸಂದೇಶವನ್ನು ತಿಳಿಸಲಾಯಿತು.
ಕೆ.ಆರ್.ಎಸ್ ಪಕ್ಷ ತಹಶಿಲ್ದಾರ್ ಕಚೇರಿ ಭೇಟಿ ಮಾಡಿದ ಸಂದರ್ಭದಲ್ಲಿ,ಪಕ್ಷದ ಕಾರ್ಯಕರ್ತರು ವೀಡಿಯೋ ಚಿತ್ರೀಕರಣ ಮಾಡುವಾಗ ತಹಶೀಲ್ದಾರ್ ದಿನೇಶ್ ಹಾಗೂ ಪಕ್ಷದ ಕಾರ್ಯಕರ್ತ ನಡುವೆ ಮಾತಿನ ಚಕಮಕಿ ನಡೆದಿದೆ. ಮೊಬೈಲ್ ಆಫ್ ಮಾಡಿ ಅನ್ನುವ 14 ಸೆಕೆಂಡ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ಬಗ್ಗೆ ಸುದ್ದಿ ತಿಳಿದ ಬಳಿಕ ಆನೇಕಲ್ ಪೊಲೀಸರು ಭೇಟಿ ನೀಡಿ ಪಕ್ಷದ ಕಾರ್ಯಕರ್ತರು ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿ ಬಿಟ್ಟು ಕಳಿಸಿದ್ದಾರೆ.ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಭ್ರಷ್ಟಾಚಾರ ಮುಕ್ತ ರಾಜ್ಯವನ್ನು ಕಟ್ಟಲು ಪಣತೊಟ್ಟಿದ್ದಾರೆ.
Kshetra Samachara
12/02/2022 06:49 pm