ದೊಡ್ಡಬಳ್ಳಾಪುರ: ರಾತ್ರಿ ಹೊತ್ತು ರೈತರ ತೋಟಕ್ಕೆ ದಾಳಿ ಇಡುತ್ತಿದ್ದ ಖದೀಮರು ಬೋರ್ ವೆಲ್ ಕೇಬಲ್ ಕದ್ದು ಪರಾರಿಯಾಗುತ್ತಿದ್ದರು.15 ಹೆಚ್ಚು ಗ್ರಾಮಗಳ ಕೇಬಲ್ ಕದ್ದಿದ್ದ ಕಳ್ಳರು ರೈತರ ನಿದ್ದೆಗೆಡಿಸಿದ್ದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಈಗ ಮೂವರು ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ 15 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೇಬಲ್ ಕಳ್ಳರ ಆತಂಕ ಮನೆ ಮಾಡಿತ್ತು.ರೈತರ ತೋಟಗಳಿಗೆ ರಾತ್ರಿ ಹೊತ್ತು ದಾಳಿ ಇಡುತ್ತಿದ್ದ ಖದೀಮರು, ಬೋರ್ ವೆಲ್‌ನ ಕೇಬಲ್ ಕಟ್ ಮಾಡಿ ಕೇಬಲ್ ಕದ್ದು ಪರಾರಿಯಾಗುತ್ತಿದ್ದರು. ಒಂದು ಆಡಿ ಕೇಬಲ್ ವೈರ್‌ಗೆ 200 ರಿಂದ 300 ಬೆಲೆ ಇದೆ. ಕೇಬಲ್ ನಲ್ಲಿರುವ ತಾಮ್ರಕ್ಕೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆನೇ ಇರೋದು. ಹಾಗೆ ಕದ್ದ ಕೇಬಲ್ ಅನ್ನ ಖದೀಮರು ಮಾರಾಟ ಮಾಡಿ ಸಾವಿರಾರು ರೂಪಾಯಿ ಜೇಬಿಗಿಳಿಸಿಕೊಳ್ಳುತ್ತಿದ್ದರು.
ನರಸಿಂಹನಹಳ್ಳಿ, ಲಘುಮೇನಹಳ್ಳಿ, ಗುಂಜೂರು, ಹಾಡೋನಹಳ್ಳಿ, ನೆಲ್ಲುಗುದಿಗೆ, ಲಕ್ಷ್ಮಿಪುರ, ಎಸ್.ನಾಗೇನಹಳ್ಳಿ, ತಿರುಮಗೊಂಡನಹಳ್ಳಿ, ಟಿ.ಹೊಸಹಳ್ಳಿ ಸೇರಿದಂತೆ 30ಕ್ಕೂ ಗ್ರಾಮಗಳಲ್ಲಿ ಕೇಬಲ್ ಕಳ್ಳತನ ಪ್ರಕರಣ ನಡೆದಿವೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಚಹಳ್ಳಿ ಮತ್ತು ಹಾಡೋನಹಳ್ಳಿಯ ಮೂವರು ಖದೀಮರನ್ನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
Kshetra Samachara
12/02/2022 05:44 pm