ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಪ್ರೀತಿಸಿದ ಹುಡ್ಗಿಯನ್ನ ಅನುಮಾನಿಸಿ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ

ದೊಡ್ಡಬಳ್ಳಾಪುರ: ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಟಾರ್ಫ್ ನರ್ಸ್ ಮತ್ತು ಅಕೌಂಟೆಂಟ್ ನಡುವೆ ಪ್ರೇಮಾಂಕುರವಾಗಿತ್ತು.ಎರಡು ಕುಟುಂಬಗಳ ನಡುವೆ ಮದುವೆ ಮಾತುಕತೆ ಸಹ ನಡೆದಿತ್ತು. ಆದರೆ ಇಂದು ಬೆಳಿಗ್ಗೆ ನರ್ಸ್‌ಗೆ ಚಾಕುವಿನಿಂದ ಇರಿದು ಬಿಟ್ಟಿದ್ದ ಪಾಗಲ್ ಪ್ರೇಮಿ.

ದೊಡ್ಡಬಳ್ಳಾಪುರ ನಗರದ ಯೋಗಿ ನಾರಾಯಣ ಬಡಾವಣೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ಪಾಗಲ್ ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾದ ನರ್ಸ್ ಪ್ರಭಾವತಿ .ಡಿ (26) ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೈಸೂರು ಮೂಲದ ಪ್ರಭಾವತಿ .ಡಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಟಾರ್ಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ನಗರದ ಯೋಗಿ ನಾರಾಯಣ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ಸಹೋದರನ ಜೊತೆ ವಾಸವಾಗಿದ್ದಳು.

ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಇದೇ ಆಸ್ಪತ್ರೆಯಲ್ಲಿ ಅಕೌಂಟಂಟ್ ಆಗಿದ್ದ ಗಿರೀಶ್ ಜೊತೆ ಪ್ರೇಮಾಂಕುರವಾಗಿದೆ. ಇಬ್ಬರ ಪ್ರೀತಿಯ ವಿಷಯ ಎರಡು ಕುಟುಂಬಕ್ಕೂ ತಿಳಿದಿದ್ದು ಮದುವೆ ಮಾತುಕತೆ ಸಹ ನಡೆದಿತ್ತು.

ಆದರೆ ಇಂದು ಬೆಳಿಗ್ಗೆ ಪ್ರಭಾವತಿ ಮನೆಗೆ ಬಂದ ಗಿರೀಶ್ ಆಕೆಯ ಹೊಟ್ಟೆ, ಕುತ್ತಿಗೆ, ಬೆನ್ನಿಗೆ ಇರಿದು ಪರಾರಿಯಾಗಿದ್ದಾನೆ.

ಚಾಕು ಇರಿದು ಪರಾರಿಯಾಗಿದ್ದ ಗಿರೀಶ್ ನನ್ನ ದೊಡ್ಡಬಳ್ಳಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪ್ರಭಾವತಿ ಮತ್ತೊಬ್ಬ ಹುಡುಗನ ಜೊತೆ ಸಲುಗೆಯಿಂದ ಇದ್ದಳು. ಇದೇ ಕಾರಣಕ್ಕೆ ಗಿರೀಶ್ ಆಕೆಯ ಇರಿದಿದ್ದಾನೆ ಎಂಬ ಮಾತುಗಳು ಕೇಳಿ ಬಂದಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Edited By : Shivu K
Kshetra Samachara

Kshetra Samachara

11/02/2022 04:24 pm

Cinque Terre

1.59 K

Cinque Terre

0

ಸಂಬಂಧಿತ ಸುದ್ದಿ