ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಅಮ್ಮಾ ನನ್ನ ಸಾಯಿಸಿ ಬಿಡ್ತಾರೆ ಬೇಗ ಬಾರಮ್ಮ ಎಂದಿದ್ದ ನತದೃಷ್ಟ ಮಗಳು ಪರಲೋಕಕ್ಕೆ..

ನೆಲಮಂಗಲ: ಒಂದೆಡೆ ಶವವಾಗಿ ಮಲಗಿರೋ ಮಹಿಳೆ, ಮತ್ತೊಂದೆಡೆ ಮಗಳ ಅಗಲಿಕೆಯ ನೋವಿನಿಂದ ರೋದಿಸುತ್ತಿರೋ ತಾಯಿ,ಎಸ್ ಈ ದೃಶ್ಯ ಕಂಡು ಬಂದಿದ್ದು, ಬೆಂ.ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಪೆಮ್ಮನಹಳ್ಳಿ ಗ್ರಾಮದಲ್ಲಿ. ಹೀಗೆ ಶವಾಗಾರದಲ್ಲಿ ಶವವಾಗಿ ಮಲಗಿರೋ ಮಹಿಳೆ ಹೆಸ್ರು ರೇಖಾ 30ವರ್ಷ ತುಮಕೂರು ಜಿಲ್ಲೆಯ ದಿಬ್ಬೂರು ಮೂಲದವಳು. ಕಳೆದ 12 ವರ್ಷದ ಹಿಂದೆ ಈ ಮೃತ ರೇಖಾಳನ್ನ, ಸೋಂಪುರ ಸಮೀಪದ ಲಕ್ಕೂರಿನ ಗಿರೀಶ್ ಜೊತೆ ಮದುವೆಯಾಗಿತ್ತು.

ತಂದೆ ಇಲ್ಲದ ತಬ್ಬಲಿ ರೇಖಾಳನ್ನ ಗಿರೀಶ್ ತಂದೆ ನಾರಾಯಣಪ್ಪ ಕರೆತಂದು ನಿನಗೆ ನಾನು ತಂದೆ ಸ್ಥಾನ ಕೊಡ್ತೀನಮ್ಮ ಅಂತ ಮಗನಿಗೆ ಮದುವೆ ಮಾಡಿಕೊಂಡಿದ್ರು. ಆದ್ರೆ ನೆನ್ನೆ ರಾತ್ರಿ ನಡೆದ ಜಗಳದಲ್ಲಿ ಇದೇ ಮಾವ ನಾರಾಯಣಪ್ಪ ಹಾಗೂ ಪತಿ ಗಿರೀಶ್, ರೇಖಾಳ ಕುತ್ತಿಗಿ ಹಿಸುಕಿ ಕೊಂದಿದ್ದಲ್ಲದೇ, ಯಾರಿಗೂ ಅನುಮಾನ ಬಾರದಿರಲಿ ಅಂತ ಮನೆ ಕಿಟಕಿಯ ಕಂಬಿಗೆ ನೇಣು ಬಿಗಿದು ಹೈಡ್ರಾಮ ಸೃಷ್ಟಿಸಿದ್ರು..

ಮದುವೆಯಾದ ದಿನದಿಂದಲೂ ದಾಂಪತ್ಯದಲ್ಲಿ ಬಿರುಕು ಹೆಚ್ಚುತ್ತಾ ಹೋದ್ರು, 5 ವರ್ಷದ ಹೆಣ್ಣು ಮಗು, 4 ವರ್ಷದ ಗಂಡು ಮಗು ಇದೆ. ಅಲ್ಲದೇ ಆಗಾಗ್ಗೆ ಕುಟುಂಬಗಳ ನಡುವಿನ ವೈಮನಸ್ಸಿದಿಂದ ಜಗಳಗಳು ಉಂಟಾಗುತ್ತಿದ್ದವು. ನಿನ್ನೆ ಬುಧವಾರ ಕೂಡ ಇವಳೊಂದಿಗೆ ನಡೆದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ವಿಚಾರಕ್ಕೆ ಮೃತ ರೇಖಾ ಪತಿ ಗಿರೀಶ್ ಹಾಗೂ ಮಾವ ನಾರಾಯಣಪ್ಪ ಮನಸೋ ಇಚ್ಚೆ ಹಲ್ಲೆ ಮಾಡುತ್ತಿದ್ರಂತೆ. ಇದರ ನಡುವೆಯೇ ರೇಖಾ ತನ್ನ ತಾಯಿಗೆ ಕರೆ ಮಾಡಿ ಅಮ್ಮಾ ನನ್ನ ಸಾಯಿಸಿ ಬಿಡ್ತಾರೆ ಬೇಗ ಬಾರಮ್ಮ ಅಂದಿದ್ದಾಳೆ. ಆದರೆ ತುಮಕೂರಿನಿಂದ ರೇಖಾ ತಾಯಿ ಪೆಮ್ಮನಹಳ್ಳಿಗೆ ಬರೋ ಅಷ್ಟರಲ್ಲಿ ರೇಖಾ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ದಾಬಸ್‌ಪೇಟೆ ಪೊಲೀಸ್ರು ತುಮಕೂರು ಜಿಲ್ಲಾಸ್ಪತ್ರೆಗೆ ಮೃತ ರೇಖಾಳ ಮೃತದೇಹವನ್ನ ಮರಣೋತ್ತರ ಪರೀಕ್ಷೆ ಮಾಡಿಸಿದ್ದು, ಆರೋಪಿ ಪತಿ ಗಿರೀಶ್ ಮತ್ತು ಮಾವ ನಾರಾಯಣಪ್ಪರನ್ನ ವಶಕ್ಕೆ ಪಡೆದು ವಿಚಾರಣೆ ನೆಡೆಸುತ್ತಿದ್ದಾರೆ. ಒಟ್ಟಾರೆ ಕುಟುಂಬಸ್ಥರ ಆಭಿಪ್ರಾಯದಂತೆ ತುಮಕೂರಿನಲ್ಲೇ‌ ಅಂತ್ಯ ಸಂಸ್ಕಾರ ಮಾಡಲಾಗಿದೆ.

Edited By : Shivu K
PublicNext

PublicNext

11/02/2022 02:16 pm

Cinque Terre

46.87 K

Cinque Terre

5

ಸಂಬಂಧಿತ ಸುದ್ದಿ