ಬೆಂಗಳೂರು: ಕುಖ್ಯಾತ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ಬೇಕರಿ ರಘು ವಿರುದ್ಧ ದಕ್ಷಿಣ ವಿಭಾಗ ಪೊಲೀಸರು ಗುಂಡಾ ಕಾಯ್ದೆ ಕೇಸ್ ದಾಖಲು ಮಾಡಿದ್ದಾರೆ.
ಸೈಕಲ್ ರವಿ ಸಹಚರನಾಗಿರುವ ಬೇಕರಿ ರಘು ವಿರುದ್ಧ ಸುಮಾರು 17ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿದೆ. ಬ್ಯಾಟರಯನಪುರ ಕೇಸ್‌ನಲ್ಲಿ ಸದ್ಯ ಬೇಕರಿ ರಘು ಜೈಲಿನಲ್ಲಿದ್ದಾನೆ. ಕೊಲೆ, ಕೊಲೆಗೆ ಯತ್ನ, ಡಕಾಯಿತಿ, ಆರ್ಮ್ ಆಕ್ಟ್ ಅಡಿಯಲ್ಲಿ ಬೇಕರಿ ರಘು ಮೇಲೆ ಸಾಕಷ್ಯ ಕೇಸ್ ದಾಖಲಾಗಿದೆ. ಇಷ್ಟೇ ಅಲ್ಲದೆ ರಘು ಗ್ಯಾಂಬ್ಲಿಂಗ್, ರಿಯಲ್ ಎಸ್ಟೇಟ್, ಗಾಂಜ ವ್ಯವಹಾರ ಕೂಡ ನಡೆಸ್ತಿದ್ದ.
Kshetra Samachara
11/02/2022 11:23 am