ಯಲಹಂಕ:ಇದು ಯಲಹಂಕದ ಅಟ್ಟೂರು ಬಡಾವಣೆಯ ಮುಖ್ಯ ರಸ್ತೆ. ಮಟ ಮಟ ಮಧ್ಯಾಹ್ನ ಬೇರೆ. ಇಲ್ಲಿ ಏನ್ ನಡೆಯುತ್ತಿದೆ ಎಂದು ಜನ ಕುತೂಹಲದಿಂದಲೇ ನೋಡುತ್ತಿದ್ದಾರೆ. ಕಾರಣ, ಇಲ್ಲಿ ಇಬ್ಬರು ಗಾಂಜಾ ಹೊಡೆದ ಯುಕವರು ಕತ್ತಿನಪಟ್ಟಿ ಹಿಡಿದುಕೊಂಡು ಫಿಲ್ಮೀ ಸ್ಟೈಲ್‌ನಲ್ಲಿ ಹೊಡೆದಾಡಿಕೊಳ್ತಿದ್ದಾರೆ. ಮುಂದೇನ್ ಆಯಿತು. ಬನ್ನಿ, ಹೇಳ್ತೀವಿ.
ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಜನ ಸುತ್ತುಲೂ ನಿಂತಿದ್ದಾರೆ. ಗಾಂಜಾ ಹೊಡೆದ ಈ ಯುವಕರಿಗೆ ಇದರ ಪರಿವೇ ಇಲ್ಲ. ಈ ಪಬ್ಲಿಕ್ ಪ್ಲೇಸ್ ನಲ್ಲಿ ಮನಸೋಯಿಚ್ಛೆ ಬಡಿದಾಡಿಕೊಳ್ತಿದ್ದಾರೆ. ಯಲಹಂಕದ ವಾರ್ಡ್ ಮೂರು ಅಟ್ಟೂರಿನ ಬಿಜೆಪಿ ಕಚೇರಿ ಎದುರಿಗೆ ಈ ರೀತಿ ಫೈಟ್ ನಡೆದಿದೆ. ಇದನ್ನ ಸಾರ್ವಜನಿಕರು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲೂ
ಅಪ್ಲೋಡ್ ಮಾಡಿ ಬಿಟ್ಟಿದ್ದಾರೆ.
ಈ ವೀಡಿಯೋ ಈಗಾಗಲೇ ಯಲಹಂಕ ಉಪನಗರ ಪೊಲೀಸರಿರುವ ಗ್ರೂಪ್ ನಲ್ಲೂ ಶೇರ್ ಆಗಿದೆ. ಬೆಂಗಳೂರು ನಗರ ಪೊಲೀಸರಿಗೂ ಟ್ಯಾಗ್ ಮಾಡಿ ಶೇರ್ ಮಾಡಲಾಗಿದೆ. ಆದರೂ ಯಲಹಂಕ ಉಪನಗರ ಪೊಲೀಸರು ಮಾತ್ರ ಈ ಬಗ್ಗೆ ಏನು ಕ್ರಮ ಜರುಗಿಸದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇಂದು ಮಧ್ಯಾಹ್ನದಿಂದಲೂ ಈ ವೀಡಿಯೋ ಯಲಹಂಕದ ವ್ಯಾಟ್ಸಾಪ್ ಗ್ರೂಪ್ ಗಳಲ್ಲಿ ಸಖತ್ ಶೇರ್ ಆಗಿದೆ. ಆದರೂ ಉಪನಗರ ಪೊಲೀಸರು ಏಕೆ ಗಾಂಜಾ ವ್ಯಸನಿಗಳ ಮೇಲೆ ಕ್ರಮ ಜರುಗಿಸುತ್ತಿಲ್ಲ ಎನ್ನುವುದೇ ಈಗಿನ ಯಕ್ಷ ಪ್ರಶ್ನೆ.
PublicNext
06/02/2022 08:05 pm