ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ನಾಲ್ವರು ಗಾಂಜಾ ಪೆಡ್ಲರ್ ಅರೆಸ್ಟ್: 6 ಕೆಜಿ ಗಾಂಜಾ ವಶಕ್ಕೆ

ದೊಡ್ಡಬಳ್ಳಾಪುರ:ನಗರದ ಸುತ್ತಮುತ್ತ ಗಾಂಜಾ ಮಾರಾಟ ಮಾಡುತ್ತಿದ್ದ ಪೆಡ್ಲರ್ ಗಳನ್ನ ಬೆನ್ನತ್ತಿದ್ದ ದೊಡ್ಡಬಳ್ಳಾಪುರ ಪೊಲೀಸರು, ಆಂಧ್ರದಿಂದ ಸರಬರಾಜು ಆಗುತ್ತಿದ್ದ ಜಾಲವನ್ನ ಪತ್ತೆ ಮಾಡಿದ್ದಾರೆ.

ಜನವರಿ 21 ರಂದು ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಕೋವಿಡ್-19 ಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಪೊಲೀಸರು ಮಾಸ್ಕ್ ಹಾಕದವರಿಗೆ ದಂಡ ಹಾಕುತ್ತಿದ್ದರು. ಇದೇ ಸಮಯದಲ್ಲಿ ತ್ರಿಬಲ್ ರೈಡಿಂಗ್ ಬೈಕ್ ನಲ್ಲಿ ಬರುತ್ತಿದ್ದವರು ಪೊಲೀಸರನ್ನ ನೋಡಿ, ಬೈಕ್ ತಿರುಗಿಸಿಕೊಂಡು ವಾಪಸ್ ಹೋಗುತ್ತಿದ್ದರು.

ಸಂಶಯ ಬಂದ ಹಿನ್ನೆಲೆ ಮೂವರನ್ನು ಕರೆದು ತಪಾಸಣೆ ನಡೆಸಿದ್ದಾಗ ಬ್ಯಾಗ್ ನಲ್ಲಿ 838 ಗ್ರಾಂ ಗಾಂಜಾ ಪತ್ತೆಯಾಗಿದೆ. ರಾಕೇಶ್, ಬಿ.ಕೆ.ರಂಗನಾಥ ಮತ್ತು ಧನುಷ್ ನನ್ನ ಬಂಧಿಸಿ ವಿಚಾರಣೆ ಮಾಡಲಾಗಿ, ಮಧುರೆ ದೇವಸ್ಥಾನದಿಂದ ಗಿರಾಕಿಯಿಂದ ಗಾಂಜಾ ಖರೀದಿಸಿ ದೊಡ್ಡಬಳ್ಳಾಪುರದಲ್ಲಿ ಗಾಂಜಾ ಮಾರಾಟ ಮಾಡಲು ಗಾಂಜಾ ತಂದಿರುವ ಮಾಹಿತಿ ಸಿಗುತ್ತದೆ.

ಈ ಮೂವರ ಆರೋಪಿಗಳ ಮಾಹಿತಿ ಮೇರೆಗೆ ಆಂಧ್ರದಿಂದ ಗಾಂಜಾ ತಂದು ಕೊಡುತ್ತಿದ್ದ ಹೇಮಂತ್ ನನ್ನ ಬೆಂಗಳೂರಿನ ದೊಡ್ಡಬಿದರಕಲ್ಲಿನ ಬಳಿ ಬಂಧಿಸಿ ಆತನಿಂದ 6 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

05/02/2022 04:41 pm

Cinque Terre

2.04 K

Cinque Terre

0

ಸಂಬಂಧಿತ ಸುದ್ದಿ