ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನೈತಿಕ ತಾಣವಾಗಿದ್ದ ಸ್ಪಾ ಮೇಲೆ ಸಿಸಿಬಿ ದಾಳಿ: 13 ಯುವತಿಯರ ರಕ್ಷಣೆ

ಬೆಂಗಳೂರು: ಅನೈತಿಕ‌ ಚಟುವಟಿಕೆ ನಡೆಸ್ತಿದ್ದ ಸ್ಪಾಗಳ‌ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳ ದಾಳಿ ನಡೆಸಿ 13 ಯುವತಿಯರ ರಕ್ಷಣೆ ಮಾಡಿದೆ.

ಅಕ್ರಮವಾಗಿ ಯುವತಿಯರನ್ನ‌ ಬಳಕೆ ಮಾಡಿಕೊಳ್ತಿದ್ದ ಆರೋಪ ಹಿನ್ನೆಲೆ ರಾಯಲ್ ಸ್ಪಾ,ಅಸ್ತೇಟಿಕ್ ಯೂನಿಸೆಕ್ಸ್ ಸೆಲೂನ್ , ನಿಸರ್ಗ ಆಯುರ್ವೇದಿಕ್‌ ಸ್ಪಾ ನ ಮೇಲೆ ಸಿಸಿಬಿ ದಾಳಿ ನಡೆಸಿದೆ. ನೇಪಾಳ, ಟರ್ಕಿ ,ನಾಗಲ್ಯಾಂಡ್ , ಅಸ್ಸಾಂ ,ದೆಹಲಿ ಪಶ್ಚಿಮ ಬಂಗಾಳ ಮತ್ತು ಸ್ಥಳೀಯ ಯುವತಿಯರನ್ನ ಲೈಂಗಿಕವಾಗಿ ಬಳಸಿಕೊಳ್ತಿದ್ರು.

ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿದಾಗ 13 ಜನರ ರಕ್ಷಣೆ ಮಾಡಿ ಇಬ್ಬರನ್ನು ಬಂಧಿಸಲಾಗಿದೆ. ಹೆಚ್.ಎಸ್. ಆರ್. ಲೇಔಟ್ ,ಅಶೋಕ್ ನಗರ , ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದ್ದು, 9 ಜನ ಆರೋಪಿಗಳ ಮೇಲೆ ದೂರು ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

05/02/2022 02:46 pm

Cinque Terre

808

Cinque Terre

0

ಸಂಬಂಧಿತ ಸುದ್ದಿ