ನೆಲಮಂಗಲ : ಸಾಲಬಾಧೆ ತಾಳಲಾರದೆ ಮನನೊಂದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂ.ಉತ್ತರ ತಾಲ್ಲೂಕು ಚಿಕ್ಕಗೊಲ್ಲರಹಟ್ಟಿಯಲ್ಲಿ ನೆಡೆದಿದೆ.
ಇನ್ನೂ ಕುಣಿಗಲ್ ಮೂಲದ ಸಂತೋಷ (29) ಮೃತ ದುರ್ದೈವಿ, ವ್ಯಕ್ಯೂಮ್ ಸರ್ವೀಸ್ ಸೆಂಟರ್ ನೆಡೆಸಿಕೊಂಡು ಜೀವನ ನಿರ್ವಹಿಸುತ್ತಿದ್ದ ಈತ ಕೈ ಸಾಲದ ಒತ್ತಡಕ್ಕೆ ಮನನೊಂದು ತನ್ನ ಬಾಡಿಗೆ ರೂಂ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
Kshetra Samachara
05/02/2022 01:03 pm