ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ವ್ಯಾಪಾರದ ಸೋಗಿನಲ್ಲಿ ಬಂದು ಹಣ ಎಗರಿಸಿದ ಖದೀಮರು

ದೇವನಹಳ್ಳಿ: ಬಟ್ಟೆ ಅಂಗಡಿಯಲ್ಲಿದ್ದ ಮಹಿಳೆಯನ್ನು ಯಾಮಾರಿಸಿದ ಇಬ್ಬರು ಖದೀಮರು ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ದೇವನಹಳ್ಳಿಯ ಬಟ್ಟೆ ಅಂಗಡಿಯಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ.

ಮೂರು ದಿನಗಳ ಹಿಂದಷ್ಟೇ ಬಟ್ಟೆ ಖರೀದಿ ನೆಪದಲ್ಲಿ ಇಬ್ಬರು ಕಳ್ಳರು ಬಟ್ಟೆ ಅಂಗಡಿಗೆ ಪ್ಲಾನ್ ಮಾಡಿಕೊಂಡು ಬಂದಿದ್ದರು. ಈ ವೇಳೆ‌ ಒಬ್ಬ ವ್ಯಾಪಾರ ಮಾಡುವಂತೆ ಡ್ರಾಮ ಮಾಡಿದ್ರೆ, ಮತ್ತೋರ್ವ 2000 ನೋಟಿಗೆ ಚಿಲ್ಲರೆ ಕೇಳಿಕೊಂಡು ಬಂದಿದ್ದ. ಈ ವೇಳೆ ಮಹಿಳೆ ಚಿಲ್ಲರೆ ಕೊಡಲು ಮುಂದಾಗಿದ್ದಾರೆ. ಇಷ್ಟೆಲ್ಲ ನಡೆಯುವ ವೇಳೆ ಮಹಿಳೆ ಹಣ ಎತ್ತಿಟ್ಟಿದ್ದನ್ನ ಕಂಡು ಮತ್ತೆ ಖದೀಮರು ವ್ಯಾಪಾರ ಮಾಡುವ ನಾಟಕವಾಡಿದ್ದಾರೆ. ಒಬ್ಬ ವ್ಯಾಪಾರ ಮಾಡುತ್ತಿದ್ದರೆ, ಮತ್ತೋರ್ವ ಹಣ ಎಗರಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದ. ಕಳ್ಳರ ಈ ಎಲ್ಲ ಕರಾಮತ್ತು ಅಂಗಡಿಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ..

ಈ ಬಗ್ಗೆ ಅಂಗಡಿ ಮಾಲೀಕರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

04/02/2022 08:22 pm

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ