ಬೆಂಗಳೂರು: ಇಷ್ಟು ದಿನ ಕ್ಲಬ್ ಹೊಟೇಲ್ ಮತ್ತು ನಿರ್ಜನ ಪ್ರದೇಶದಲ್ಲಿ ಜೂಜಾಟ ಆಡ್ತಿದ್ದ ಜೂಜುಕೋರರು ಇದೀಗ ಹೈಟೆಕ್ ಮಾದರಿಯಲ್ಲಿ ಜೂಜಾಡಲು ಮುಂದಾಗಿದ್ದಾರೆ.
ಬೇರೆಡೆ ಮಾಡಿದ್ರೆ ಪೊಲೀಸರು ರೇಡ್ ಮಾಡ್ತಾರೆ ಅಂತ ಫೈವ್ ಸ್ಟಾರ್ ಹೊಟೇಲ್ ಗಳನ್ನೆ ಜೂಜು ಅಡ್ಡೆ ಮಾಡಿಕೊಂಡಿದ್ದಾರೆ. ಸದ್ಯ ಈ ಹೈ ಟೆಕ್ ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಉದಯ್ ಶೆಟ್ಟಿ, ನಟರಾಜ್, ಸುರೇಶ್ ರಾಮಕೃಷ್ಣ, ಕೃಷ್ಣ ಗೌಡ ಹಾಗೂ ಶಂಕರ್ ಎಂಬುವರನ್ನು ಬಂಧಿಸಿ 20 ಲಕ್ಷ ನಗದು, ಒಂದು ವೇಯಿಂಗ್ ಮಿಷಿನ್ ಹಾಗೂ ಕಾರ್ಡ್ ಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳೆಲ್ಲರೂ ಹಲವು ತಿಂಗಳಿಂದ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೆನಾಸನ್ಸ್ ಹೊಟೇಲ್ ನಲ್ಲಿ ಐಷರಾಮಿ ರೂಂ ಬುಕ್ ಮಾಡಿಕೊಂಡು ಅಂದರ್ ಬಾಹರ್ ಆಡ್ತಿರು.
ಜೂಜಾಟದಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಬ್ಯುಸಿನೆಸ್ ಮೆನ್ ಗಳು ಇರುವುದು ಬೆಳಕಿಗೆ ಬಂದಿದೆ. ಇನ್ನೂ ಜೂಜು ಆಡುತ್ತಿರುವ ಬಗ್ಗೆ ಹೋಟೆಲ್ ನವರಿಗೆ ಮಾಹಿತಿ ಇದೆಯಾ ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಸಿಸಿಬಿ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
PublicNext
04/02/2022 05:43 pm