ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ಶೂ,ಚಪ್ಪಲಿ ಗ್ಯಾಂಗ್:ಈಗ ಒಬ್ಬ ಅರೆಸ್ಟ್

ಬೆಂಗಳೂರು: ಅಪಾರ್ಟ್‌ಮೆಂಟ್ ಗಳಲ್ಲಿ ಬ್ರ್ಯಾಂಡೆಡ್ ಶೂ, ಚಪ್ಪಲಿ ಕಳ್ಳತನ ಮಾಡುತ್ತಿದ್ದ ನಾಲ್ವರ ಕಳ್ಳರ ಪೈಕಿ ಓರ್ವನನ್ನು ಸೆಕ್ಯೂರಿಟಿ ಗಾರ್ಡ್ ನೆರವಿನಿಂದ ವೈಟ್ ಫೀಲ್ಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ರಾಜು ಆ್ಯಂಡ್ ಗ್ಯಾಂಗ್ ಶೂ ಹಾಗೂ ಚಪ್ಪಲಿಗಳನ್ನು ಬನ್ನೇರುಘಟ್ಟ, ಮೈಕೋ ಲೇಔಟ್ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದೆ. ಅವುಗಳನ್ನ ಪಾಲಿಸಿ ಮಾಡಿ ರಸ್ತೆಬದಿ ಮಾರಾಟ ಕೂಡ ಮಾಡಿದೆ.

ಮಾರಕಾಸ್ತ್ರ ಸಹಿತ ಕಳ್ಳತನಕ್ಕೆ ಯತ್ನಿಸಿದ್ದ ಈ ಕಳ್ಳರ ಗ್ಯಾಂಗ್, ಇಮ್ಮಡಿಹಳ್ಳಿಯ ಸಾನ್ವಿ‌ ಅಪಾರ್ಟ್ ಮೆಂಟ್ ಗೆ ಜ.27ರ ರಾತ್ರಿ ನುಗ್ಗಿತ್ತು.ಆದರೆ ಸೆಕ್ಯೂರಿಟಿ ಗಾರ್ಡ್ ಸಮಯ ಪ್ರಜ್ಞೆಯಿಂದ ಮೂವರು ಕಳ್ಳರ ಪೈಕಿ ಓರ್ವನನ್ನು ಹಿಡಿದು ವೈಟ್ ಫೀಲ್ಡ್ ಪೊಲೀಸರಿಗೆ ಒಪ್ಪಿಸಲಾಗಿದೆ.

ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನ ಬಂಧಿಸಿದ್ದಾರೆ.. ಸೆಕ್ಯೂರಿಟಿ ಗಾರ್ಡ್ಸ್ ತೋರಿದ ಧೈರ್ಯಕ್ಕೆ ವೈಟ್ ಫೀಲ್ಡ್ ಡಿಸಿಪಿ ಎಸ್.ಗಿರೀಶ್ ರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Shivu K
Kshetra Samachara

Kshetra Samachara

03/02/2022 10:29 am

Cinque Terre

1.28 K

Cinque Terre

0

ಸಂಬಂಧಿತ ಸುದ್ದಿ