ಬೆಂಗಳೂರು:ವೈದ್ಯನ ಮೇಲೆ ಟ್ರಾಫಿಕ್ ಪೊಲೀಸ್ ದರ್ಪ ಅಂತ ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ನೋಡಿ ಜನ ಸಂಚಾರಿ ಪೊಲೀಸ್ರು ಅದ್ಯಾಕಾದ್ರೂ ಹಿಂಗ್ ಆಡ್ತಾರೋ ಅಂತ ಬೈದು ಕೊಂಡು ಸುಮ್ಮನಾಗಿದ್ರು.
ಆದ್ರೆ ಈ ಆರೋಪಕ್ಕೆ ಸದ್ಯ ಭಾರಿ ಟ್ವಿಸ್ಟ್ ಸಿಕ್ಕಿದೆ. ಹೌದು. ವೈದ್ಯನ ವಾಹನದ ಮೇಲಿರೋದ್ದು ಬರೋಬ್ಬರಿ 10 ಟ್ರಾಫಿಕ್ ರೂಲ್ ವೈಲೆಷನ್ ಪ್ರಕರಣಗಳು. ಇದರೋ ಹತ್ತು ಕೇಸ್ ನಲ್ಲೂ ಬಹುತೇಕ ಹೆಲ್ಮೆಟ್ ಧರಿಸದ ಪ್ರಕರಣಗಳೇ ಹೆಚ್ಚು,
ಜೊತೆಗೆ ವೈದ್ಯನನ್ನು ಪೊಲೀಸ್ರು ತಡೆದಿದ್ದು ಸೈಲೆನ್ಸರ್ ಡಿಫಾಲ್ಟ್ ಆದ ಹಿನ್ನೆಲೆಯಲ್ಲಿಯೇ.
ಡಿಫಾಲ್ಟ್ ಸೈಲೆನ್ಸರ್ ವಿಚಾರಕ್ಕೆ ವಿಜಯನಗರ ಟ್ರಾಫಿಕ್ ಪೊಲೀಸರು ವಾಹನ ತಡೆದು ತಪಾಸಣೆ ನಡೆಸಿದಾಗ, ಹಳೆ ಕೇಸ್‌ಗಳು ಪತ್ತೆಯಾಗಿವೆ.ಈ ವೇಳೆ ಇದನ್ನ ಕ್ಲಿಯರ್ ಮಾಡಿ ಎಂದಾಗ ಮಾತಿಗೆ ಮಾತು ಬೆಳೆದಿತ್ತು. ಆದ್ರೂ ವೈದ್ಯರ ಬಳಿ
ಆರು ಸಾವಿರದ ಐನೂರು ದಂಡ ಕಟ್ಟಿಸಿದ್ರು. ದಂಡ ಕಟ್ಟಿಸಿಕೊಂಡರು ಎಂಬ ಕಾರಣಕ್ಕೆ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆಂದು ಪೊಲೀಸ್ರು ಹೇಳ್ತಿದ್ದಾರೆ.
Kshetra Samachara
03/02/2022 10:24 am