ಬೆಂಗಳೂರು: ನಗರದ ಮನೆಯೊಂದರ ಕಾಂಪೌಂಡ್ನಲ್ಲಿಯೇ ಶವ ಸಂಸ್ಕಾರ ಮಾಡಲಾಗಿ, ಅಂತ್ಯಸಂಸ್ಕಾರ ನಡೆಸಿದ್ದಕ್ಕೆ ಸ್ಥಳೀಯರಿಂದ ವಿರೋಧ ಕೂಡ ವ್ಯಕ್ತವಾಗಿದೆ.
ನಗರದ ಪುಟ್ಟೇನಹಳ್ಳಿಯ ಪಾಂಡುರಂಗ ನಗರದಲ್ಲಿ ಕಳೆದ 3 ದಿನಗಳ ಹಿಂದೆ 80 ವರ್ಷದ ವೃದ್ಧೆ ಮೃತಪಟ್ಟಿದ್ದರು. ಸ್ವಂತ ಮನೆಯ ಜಾಗದಲ್ಲಿಯೇ ಕುಟುಂಬದವರು ಅಂತ್ಯಕ್ರಿಯೆ ಮಾಡಿದ್ದಾರೆ. ಈ ಹಿಂದೆ ಮಾಲೀಕರ ತಂದೆ ಅಂತ್ಯ ಸಂಸ್ಕಾರ ವನ್ನು ಸಾಕಷ್ಟು ವರ್ಷಗಳ ಹಿಂದೆ ಇದೇದೇ ಸ್ಥಳದಲ್ಲೇ ನಡೆದಿತ್ತು. ಈ ಕಾರಣಕ್ಕೆ ಇಲ್ಲಿಯೇ ವೃದ್ಧೆಯ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಮೃತದೇಹವನ್ನ ನೋಡಿ ಮನೆಯಲ್ಲಿನ ಮಕ್ಕಳು ಭಯ ಪಡುತ್ತಾರೆ. ಅಂತಹದರಲ್ಲಿ ಜನ ವಾಸಿಸುವ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಿದರೆ ಹೇಗೆ ಎಂದು ಈಗ ಸ್ಥಳೀಯರು ಪ್ರಶ್ನಿಸಿದ್ದಾರೆ. ಶವ ಹೊರತೆಗೆದು ಬೇರೆಡೆ ಹೋಗಿ ಅಂತ್ಯಸಂಸ್ಕಾರ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ವಿರೋಧ ಹೆಚ್ಚಾಗುತ್ತಿದ್ದಂತೆ ಮೃತಳ ಕುಟುಂಬದವರು ಲೇಔಟ್ ಅಸೋಸಿಯೇಷನ್ ಅಧ್ಯಕ್ಷರ ಮೇಲೆ ಕಲ್ಲು ತೂರಾಟಾ ನಡೆಸಿದ್ದಾರೆ. ಇದರಿಂದ ಜಟಾಪಟಿ ಏರ್ಪಟ್ಟು ಅದು ತಾರಕ್ಕೇರಿತ್ತು.
ವಿಷಯ ತಿಳಿದ ಪುಟ್ಟೇನಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಮೃತರ ಕುಟುಂಬಸ್ಥರು ಮತ್ತು ನೆರೆ ಹೊರೆಯವರ ಮನವೊಲಿಸುವುದರಲ್ಲಿ ತಾತ್ಕಾಲಿಕವಾಗಿ ಯಶಸ್ವಿಯಾಗಿದ್ದಾರೆ.
Kshetra Samachara
02/02/2022 10:18 pm