ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಣಕ್ಕಾಗಿ ಪಕ್ಕದ ಮನೆಯ ಬೀಗ ಮುರಿದ ಕಳ್ಳ ಅಂದರ್

ಬೆಂಗಳೂರು: ಹಣಕ್ಕಾಗಿ ಪಕ್ಕದ ಮನೆ ಬೀಗ ಮುರಿದಿದ್ದ ಕಳ್ಳನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಜೀವನ ನಡೆಸಲು ಯಾವುದೇ ಕೆಲಸ ಇಲ್ಲದ ಆರೋಪಿ ನಫೀಜ್ ಅಹಮದ್ ಹಣಕ್ಕಾಗಿ ಕಳ್ಳತನ ದಾರಿ ಕಂಡುಕೊಂಡಿದ್ದ. ಕಳ್ಳತನ ಕೆಲಸಕ್ಕೆ ಮುಂದಾದವನಿಂದ ಪರಿಚಯಸ್ಥನ ಮನೆಯೇ ಕಳ್ಳತನಕ್ಕೆ ಸುಲಭ ಎನಿಸಿತ್ತು. ಪರಿಚಯಸ್ಥರು ಊರಿಗೆ ತೆರಳಿದ್ದ ವೇಳೆ ಬೀಗ ಮುರಿದು ಕಳ್ಳತನ ಮಾಡಿದ್ದ‌. ಬಳಿಕ ಊರಿನಲ್ಲಿದ್ದವರಿಗೆ ಸ್ಥಳೀಯರಿಂದ ಕಳ್ಳತನದ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಬೆಂಗಳೂರಿಗೆ ಬಂದ ಕುಟುಂಬಸ್ಥರು ಕೃತ್ಯದ ಬಗ್ಗೆ ಕೆಂಗೇರಿ ಠಾಣೆಗೆ ಮನೆಯವರು ದೂರು ನೀಡಿದ್ದರು.

ನಫೀಜ್ ಅಹಮದ್‌ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಸದ್ಯ ಬಂಧಿತನಿಂದ 1.20 ಲಕ್ಷ ರೂ. ಮೌಲ್ಯದ ಐದು ಗ್ರಾಂ ಚಿನ್ನ, ಒಂದು ಟಿವಿ, ಹೋಂ ಥಿಯೇಟರ್, ಸೀರೆಗಳು ಹಾಗೂ ಐದು ಕೈ ಗಡಿಯಾರಗಳನ್ನು ವಶಕ್ಕೆ ಪಡೆದ ಪೊಲೀಸರು, ಅವುಗಳನ್ನು ಮನೆ ಮಾಲೀಕರಿಗೆ ಮರಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

02/02/2022 03:02 pm

Cinque Terre

472

Cinque Terre

0

ಸಂಬಂಧಿತ ಸುದ್ದಿ