ಬೆಂಗಳೂರು: ಯಾವುದೋ ಒಂದು ಕೆಲಸ ಆಗದಿದ್ದಾಗ ಹಿರಿಯರು, 'ಮರಳಿ ಯತ್ನ ಮಾಡು' ಎನ್ನುತ್ತಾರೆ. ಹೀಗೆ ಇಬ್ಬರು ಕಳ್ಳರು ತಮ್ಮ 30 ವರ್ಷದ ಕಳ್ಳತನದ ವೃತ್ತಿ ಜೀವನದಲ್ಲಿ ಕಳ್ಳತನ ನಡೆಸಿ 34ನೇ ಬಾರಿ ಪುಟ್ಟೆನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇರ್ಫಾನ್ ಶರೀಫ್ ಕಳ್ಳತನ ನಡೆಸಿ 34ನೇ ಬಾರಿ ಸಿಕ್ಕಿಬಿದ್ದ ಆರೋಪಿ. ಇತನೊಂದಿಗೆ ಬಿಲಾಲ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಕಳ್ಳತನವನ್ನೇ ಕುಲ ಕಸುಬು ಮಾಡಿಕೊಂಡಿದ್ದರು. ಈ ಹಿಂದೆ ರಾಜ್ಯಾದ್ಯಂತ 33 ಬಾರಿ ಪೊಲೀಸರು ಇವರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದರು. ಇನ್ನೂ ಈ ಇದರಲ್ಲಿ ಮುಖ್ಯ ಕಳ್ಳನಾಗಿರುವ ಇರ್ಫಾನ್ ಜೈಲಿನಲ್ಲಿ ಸಿಗುವ ಹೊಸ ಕಳ್ಳರನ್ನು ಪರಿಚಯ ಮಾಡಿಕೊಂಡು ತರಬೇತಿ ನೀಡುತ್ತಿದ್ದ.
ಇರ್ಫಾನ್ ಮೇಲೆ ಬೆಂಗಳೂರಲ್ಲೇ ಹದಿನೈದು ಕೇಸ್ ಇದ್ದು, ಸದ್ಯ ಪುಟ್ಟೇನಹಳ್ಳಿ ಪೊಲೀಸರು ಇರ್ಫಾನ್ ಅಂಡ್ ಬಿಲಾಲ್‌ನಿಂದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಗ್ಯಾಂಗ್ ಹಿಂದೆ ಬಿದ್ದಿದ್ದ ಪುಟ್ಟೇನಹಳ್ಳಿ ಪಿಎಸ್‌ಐ ಪ್ರಸನ್ನ ಕೊನೆಗೂ ಕಳ್ಳರನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
PublicNext
02/02/2022 02:58 pm