ಬೆಂಗಳೂರು: ಸಿಲಿಕಾನ್ ಸಿಟಿ ಮತ್ತು ಬಾರ್ಡರ್ ಗೆ ಗಾಂಜಾ ಘಾಟೇನೂ ಹೊಸದಲ್ಲ. ಪೊಲೀಸ್ರು ಗಾಂಜಾ ವ್ಯಸನಿಗಳನ್ನ, ಪೆಡ್ಲರ್ ಗಳನ್ನ ಹಿಡಿದು ಕೇಸ್ ಹಾಕೋದು ರೂಟೀನ್. ಆದ್ರೆ, ಈ ಬಾರಿ ನೆಲಮಂಗಲ ಸರ್ಕಲ್ ಇನ್ಸ್ಪೆಕ್ಟರ್ ಆಂಡ್ ಟೀಂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ನೆಲಮಂಗಲದಿಂದ ಪಶ್ಚಿಮ ಗೋದಾವರಿವರೆಗೂ ಇನ್ಸ್ಪೆಕ್ಟರ್ ರಾಜೀವ್, ಪಿಎಸ್ ಐ ಚಿಕ್ಕನರಸಯ್ಯ ಟೀಂ ಕಾಲಿಟ್ಟಿದೆ.
ಗಾಂಜಾ ಘಾಟು ಹಿಡಿದು ಪಶ್ಚಿಮ ಗೋದಾವರಿಗೆ ಎಂಟ್ರಿ ಕೊಟ್ಟ ತ್ಯಾಮಗೊಂಡ್ಲು ಪೊಲೀಸ್ರಿಗೆ ಶಾಕ್ ಆಗಿತ್ತು. ಯಾಕಂದ್ರೆ ಇಲ್ಲಿ ಗಾಂಜಾ ಬೆಳೆಯನ್ನ ಹೂವು ಬೆಳೆಸುವಂತೆ ಅಚ್ಟುಕಟ್ಟಾಗಿ ಕೃಷಿ ಮಾಡ್ತಿದ್ರು. ಗಾಂಜಾ ಬೆಳೆಸಿ, ಒಣಗಿಸಿ ಪ್ಯಾಕ್ ಮಾಡಿ ಪಾರ್ಸೆಲ್ ನಗರಕ್ಕೆ ಸಾಗಿಸುತ್ತಿದ್ದ ಐನಾತಿ ಈ ರಾಮ್ ಪ್ರಸಾದ್. ಸದ್ಯ, ಇನ್ಸ್ಪೆಕ್ಟರ್ ರಾಜೀವ್ ಆಂಡ್ ಟೀಂಗೆ ಈ ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಲಾಕ್ ಆಗಿದ್ದಾನೆ.
ಗಾಂಜಾ ಸಪ್ಲೈಯರ್ ನ ಬೆನ್ನತ್ತಿದ್ದ ಪೊಲೀಸ್ರು, ಗಾಂಜಾ ಕಿಂಗ್ ಪಿನ್ ಆಂಡ್ ಸಪ್ಲೈಯರ್ ಬಂಧಿಸಿ 53 ಕೆಜಿ ಗಾಂಜಾ ಸೀಜ್ ಮಾಡಿದ್ದಾರೆ. ಆಂಧ್ರದ ರಾಮ್ ಪ್ರಸಾದ್, ನೆಲಮಂಗಲದ ಉಮೇಶ್ ಬಂಧಿತರಾಗಿದ್ದು, ಪ್ರಮುಖ ಆರೋಪಿ ಸೈಯದ್ ತಲೆಮರೆಸಿದ್ದಾನೆ.
ಗೋದಾವರಿಯಿಂದ ತಂದು ಬೆಂಗಳೂರು ಬಾರ್ಡರ್ ನಲ್ಲಿ ಗಾಂಜಾ ಬ್ಯುಸಿನೆಸ್ ಮಾಡ್ತಿದ್ದ ಈ ಟೀಂ ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ ಸಹಿತ ಹಲವೆಡೆ ಸಪ್ಲೈ ಮಾಡ್ತಿತ್ತು. ರಾಮ್ ಪ್ರಸಾದ್ ಮೂಲಕ ಉಮೇಶ್, ಸೈಯದ್ ರಿಂದ ಗಾಂಜಾ ತರಿಸಿ ನೆಲಮಂಗಲ ಟೌನ್, ಗ್ರಾಮಾಂತರದ ಕಾಲೇಜು, ಲಾರಿ ಟ್ರಾನ್ಸ್ ಪೋರ್ಟ್ ಸ್ಟ್ಯಾಂಡ್ ಗಳಲ್ಲಿ ಗಾಂಜಾ ಮಾರಾಟ ಮಾಡ್ತಿದ್ರು!
PublicNext
02/02/2022 07:57 am