ನೆಲಮಂಗಲ: ಮದುವೆಯಾಗಿ 11 ವರ್ಷ ಕಳೆದರು ಮಕ್ಕಳಾಗದ ಕಾರಣಕ್ಕೆ ಮನನೊಂದ ಮಹಿಳೆ ಮನೆಯಲ್ಲೇ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಸಿದ್ಧನಹೊಸಹಳ್ಳಿ ಗ್ರಾಮದಲ್ಲಿ ನೆಡೆದಿದೆ. ಗೌರಿಬಿದನೂರು ಮೂಲದ ಭಾಗ್ಯಮ್ಮ 30 ವರ್ಷ ನೇಣಿಗೆ ಕೊರಳೊಡ್ಡಿದ ಮಹಿಳೆ. ಕಳೆದ 11 ವರ್ಷಗಳಿಂದ ರಾಮು ಎಂಬಾತನೊಂದಿಗೆ ದಾಂಪತ್ಯ ಜೀವನ ನೆಡೆಸಿಕೊಂಡು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು.
11 ವರ್ಷವಾದ್ರು ಮಕ್ಕಳಾಗದಕ್ಕೆ ಪತಿ ರಾಮು ಮಕ್ಕಳನ್ನ ಹಡಯದ ನೀನು ನೇಣು ಹಾಕೊಂಡು ಸಾಯಿ ಎಂದು ಪತ್ನಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಎಂಬ ಕಾರಣಕ್ಕೆ ಮಾದನಾಯಕನಹಳ್ಳಿ ಪೊಲೀಸರು ಪತಿ ರಾಮುವನ್ನ ವಶಕ್ಕೆ ಪಡೆದು ವಿಚಾರಣೆ ನೆಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
31/01/2022 06:32 pm