ಬೆಂಗಳೂರು : ಟೋಯಿಂಗ್ ನಿಂದ ವಾಹನ ಸವಾರರಿಗೆ ಕಿರುಕುಳ ಹಿನ್ನೆಲೆ ಪೊಲೀಸ್ ಆಯುಕ್ತ ಕಮಲ್ ಪಂಥ್ ಮಾಧ್ಯಮ ಹೇಳಿಕೆವೊಂದನ್ನು ನೀಡಿದ್ದಾರೆ.
ಮೊನ್ನೆ ನಡೆದ ಘಟನೆ ಬಗ್ಗೆ ನಿನ್ನೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ. ಟೋಯಿಂಗ್ ನಿಯಮಗಳನ್ನ ಪಾಲಿಸದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತೆಎಲ್ಲೆಲ್ಲಿ ಗಮನಕ್ಕೆ ಬರುತ್ತಿದೆಯೋ ಅಲ್ಲಿ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಸದ್ಯ ಎಎಸ್ ಐ ನಾರಾಯಣ್ ಮೇಲೆ ಕೇವಲ ಸಸ್ಪೆಂಡ್ ಯಾಕೆ , ದೂರು ಯಾಕೆ ದಾಖಲಾಗಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಮಿಷನರ್ ಸದ್ಯ ಇನಿಷಿಯಲ್ ಆಕ್ಷನ್ ತೆಗೆದುಕೊಳ್ಳಲಾಗಿದೆ.ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಉತ್ತರಿಸಿದ್ದಾರೆ.
ಇಂದು ಸಂಜೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆ ಸಭೆ ಇದೆ. ಅಲ್ಲಿ ನಡೆಯುವ ಚರ್ಚೆಯಲ್ಲಿ ಏನ್ ತೀರ್ಮಾನವಾಗುತ್ತೊ ಅದನ್ನ ಯಥಾವತ್ತಾಗಿ ಪಾಲಿಸಲಾಗುತ್ತೆ.
ಇನ್ನು ಟೋಯಿಂಗ್ ವೆಹಿಕಲ್ ಗಳು ಪ್ರೈವೇಟ್ ಗೆ ನೀಡಿರುವ ವಿಚಾರ ಕಳೆದ ಐದು ವರ್ಷಗಳಿಂದ ಜಾರಿಯಲ್ಲಿದೆ. 40 ಸ್ಟೇಷನ್ ಗಳ ವೆಹಿಕಲ್ ಗಳಿಗೆ ಸಿಬ್ಬಂದಿ ಮೆಂಟೇನ್ ಮಾಡೋಕೆ ಆಗದಿರುವ ಕಾರಣ ಪ್ರೈವೇಟ್ ಸಿಬ್ಬಂದಿ ನೇಮಕ ಆಗಿದೆ. ಎಲ್ಲವನ್ನೂ ಮುಖ್ಯಮಂತ್ರಿಗಳ ಸಭೆಯಲ್ಲಿ ತೀರ್ಮಾನಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
PublicNext
31/01/2022 01:07 pm