ಯಲಹಂಕ: ಕೇವಲ ಒಂದು ಗುಂಟೆ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿದೆ. ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ನೆನ್ನೆ ಸಂಜೆ ಘಟನೆ ನಡೆದಿದೆ. ರವಿ ಮತ್ತು ರಾಜಶೇಖರ್ ಒಂದು ಗುಂಟೆಗಾಗಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಜಮೀನಿಗಾಗಿ ರಸ್ತೆ ಬದಿಯಲ್ಲಿಯೇ ಮಹಿಳೆಯರು- ಪುರುಷರ ಹೊಡೆದಾಟದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಮೈಲನಹಳ್ಳಿ ರಸ್ತೆಗೆ ಹೊಂದಿಕೊಂಡ ಒಂದು ಗುಂಟೆ ಜಾಗದ ಅಗ್ರಿಮೆಂಟ್ ಮಾಡಿಕೊಡಲಾಗಿತ್ತು. ಅಗ್ರಿಮೆಂಟ್ ಮಾಡಿಕೊಂಡಿದ್ದೇವೆ, ಜಾಗ ಬಿಟ್ಟುಕೊಡಿ ಎನ್ನುವುದು ಒಬ್ಬರ ವಾದ. ಕೇವಲ ಅಗ್ರಿಮೆಂಟ್ ಮಾಡಿಕೊಂಡು, ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೆ ಪೊಸಿಷನ್ ಗೆ ಹೇಗೆ ಬರ್ತೀರಾ ಎನ್ನುವುದು ಮತ್ತೊಬ್ಬರ ವಾದ.
ರಾಜಶೇಖರ್ ಕಡೆಯವರು ಜೆಸಿಬಿ ಹಾಗೂ ಕೆಲ ಪುಂಡರನ್ನು ಕರೆತಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪವಿದೆ.
ರವಿ ತಂದೆ ರಾಮಣ್ಣರ ಮೇಲೆ ರಾಜಶೇಖರ್ ಗುಂಪಿನಿಂದ ಹಲ್ಲೆಯಾಗಿದ್ದು, ರಾಮಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ, ಹಲ್ಲೆಗೊಳಗಾದ ರಾಮಣ್ಣ ಬಾಗಲೂರು ಠಾಣೆಗೆ ದೂರು ನೀಡಲು ಹೋದರೆ, ಪೊಲೀಸರು ಮೊದಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಸದ್ಯ, ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಸುರೇಶ್ ಬಾಬು,
Public Next ಯಲಹಂಕ
PublicNext
30/01/2022 07:11 pm