ಬೆಂಗಳೂರು: ಉದ್ಯಮಿ ದಿ. ಆದಿಕೇಶವಲು ನಾಯ್ಡು ಮೊಮ್ಮಗನ ಈ ವಿಡಿಯೋ ನೋಡಿದ್ರೆ ಇದನ್ನ ವಿಕೃತಿ ಏನ್ನಬೇಕೋ ದರ್ಪ ಏನ್ನಬೇಕೋ ಗೊತ್ತಾಗ್ತಿಲ್ಲ. ಮನುಷ್ಯ ಮಾನವೀಯ ಮೌಲ್ಯವನ್ನ ಸಂಪೂರ್ಣ ವಾಗಿ ಕಳೆದುಕೊಂಡಾಗ ಮಾತ್ರ ಇಂಥಹ ಕೆಲಸ ಮಾಡಲು ಸಾಧ್ಯ.
ಈ ದೃಶ್ಯ ನೋಡಿದ್ರೆ ಎಂಥಹ ಕಲ್ಲು ಹೃದಯದವರಿಗೂ ರಕ್ತ ಕುದಿಯುತ್ತೆ.ಉದ್ದೇಶ ಪೂರ್ವಕವಾಗಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿದ್ದೆ ದೊಡ್ಡ ಕುಟಂಬದ ಸಣ್ಣತನ ಹುಡುಗ.
ದಿ. ಆದಿಕೇಶವಲು ನಾಯ್ಡು ಮೊಮ್ಮಗ ಆದಿಯಿಂದ ಈ ವಿಕೃತಿ ನಡೆದಿದೆ. ಒಂದು ಬೀದಿ ನಾಯಿಯ ಮೇಲೆ ಉದ್ದೇಶ ಪೂರ್ವಕವಾಗಿಯೇ ಆಡಿಕಾರನ್ನ ರಿವರ್ಸ್ ತೆಗೆದುಕೊಂಡು ಹತ್ತಿಸಿ ಆದಿ ವಿಕೃತಿ ಮೆರೆದಿದ್ದಾನೆ. ಕಾರು ಹತ್ತಿದ ರಭಸಕ್ಕೆ ವಿಲವಿಲ ಒದ್ದಾಡಿ ನಾಯಿ ಪ್ರಾಣ ಬಿಟ್ಟಿದೆ.
ಜಯನಗರ 1st ಬ್ಲಾಕ್ 10th B ಮೈನ್ ನಲ್ಲಿ ನಡೆದಿರುವ ಘಟನೆ ಇದಾಗಿದ್ದು,ಘಟನೆಯ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಬದ್ರಿ ಎಂಬುವವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಆದಿ ನಾಪತ್ತೆಯಾಗಿದ್ದಾನೆ.
PublicNext
30/01/2022 04:18 pm