ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾವಿಗೆ ಬಿದ್ದ ಮೊಬೈಲ್ ತೆಗೆಯಲು ಹೋಗಿ ಪ್ರಾಣ ಬಿಟ್ಟ ಯುವಕ

ಚಿಕ್ಕಬಳ್ಳಾಪುರ: ಬಾವಿಯಲ್ಲಿ ಮೊಬೈಲ್ ಬಿದ್ದಿತ್ತು. ಅದನ್ನ ತೆಗೆಯಲು ಬಾವಿಗೆ ಹಗ್ಗ ಇಳಿಬಿಟ್ಟ. ಹಗ್ಗದೊಂದಿಗೆ ಬಾವಿಗೆ ಇಳಿದ. ಆದರೆ ಆತ ಜೀವಂತವಾಗಿ ಬರಲೇ ಇಲ್ಲ.

ಮೂರೇ ಮೂರು ಅಡಿ ಅಗಲದ 65 ಅಡಿ ಆಳದ ಬಾವಿಯಲ್ಲಿ ಅನಿಲ್ ಎಂಬ ಯುವಕ ಇಳಿದಿದ್ದ. ಬಾವಿಯಲ್ಲಿ ಬಿದ್ದ ಮೊಬೈಲ್ ಅನ್ನ ಹೊರಗೆ ತೆಗೆಯೋದೇ ಈತನ ಉದ್ದೇಶವಾಗಿತ್ತು. ಆದರೆ ಹಗ್ಗದಿಂದ ಬಾವಿಗೆ ಇಳಿದ ಅನಿಲ್, ಮತ್ತೆ ಮೇಲೆ ಬಂದಿರೋದು ಶವವಾಗಿಯೇ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾವಿಯಲ್ಲಿ ಉಸಿರುಗಟ್ಟೆ ಅನಿಲ್ ಪ್ರಾಣ ಬಿಟ್ಟಿದ್ದಾನೆ. ಸ್ಥಳೀಯ ಪೊಲೀಸರು ಮತ್ತು ಎನ್‌.ಡಿ.ಆರ್‌.ಎಫ್ ತಂಡದ ಎಷ್ಟೇ ಪ್ರಯತ್ನಿಸಿದರೂ ಅನಿಲ್ ಉಳಿಯಲಿಲ್ಲ. ಹೆಣವಾಗಿಯೇ ಮೇಲೆ ಬಂದಿದ್ದಾನೆ. ಅನಿಲ್ ಹುಡುಕಿಕೊಂಡು ಬಾವಿ ಬಳಿಗೆ ಬಂದಾಗಲೇ ಈ ಘಟನೆ ಬೆಳಕಿಗೆ ಬಂದಿದೆ.

Edited By : Shivu K
Kshetra Samachara

Kshetra Samachara

30/01/2022 03:26 pm

Cinque Terre

744

Cinque Terre

0

ಸಂಬಂಧಿತ ಸುದ್ದಿ