ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ

ಬೆಂಗಳೂರು: ಸಿಲಿಕಾನ್ ಸಿಟಿಯನ್ನ ಸ್ಮಾರ್ಟ್ ಸಿಟಿ‌ ಮಾಡ್ತಿವಿ, ಹೈಟೆಕ್ ಸಿಟಿ‌ ಮಾಡ್ತಿವಿ ಅಂತ ಇರೋ ಬರೋ ರಸ್ತೆಗಳನ್ನ ಅಗೆದು ಬಿಟ್ಟಿದ್ದಾರೆ.‌ ಇದೇ ಕಾರಣಕ್ಕೆ ನಗರದಲ್ಲಿ ನಿತ್ಯ ಸಾವು ನೋವು ಗಳ ಸಂಖ್ಯೆ ಜಾಸ್ತಿ ಆಗ್ತಿದೆ.

ಇಂದು ಕೂಡ ನಗರದಲ್ಲಿ ರಸ್ತೆ ಗುಂಡಿಗೆ ಮಹಿಳೆಯೊಬ್ರು ಮೃತಪಟ್ಟಿದ್ದಾರೆ. ಮಾಗಡಿ‌ ಮುಖ್ಯ ರಸ್ತೆಯ ಬ್ಯಾಡರಹಳ್ಳಿ ರಸ್ತೆ ಗುಂಡಿಯಲ್ಲಿ ಈ ದುರಂತ ಸಂಭವಿಸಿದೆ. ಇಲ್ಲಿ ಅಂಜಾನನಗರ ಬಸ್ ಸ್ಟಾಂಡ್ ಬಳಿ ಇಂದು ಮುಂಜಾನೆ ಶರ್ಮಿಳಾ ಹಾಗೂ ಪ್ರಕಾಶ್ ದಂಪತಿ ಟೂ ವ್ಹೀಲರ್ ‌ನಲ್ಲಿ ಸಂಚರಿಸುತ್ತಿದ್ರು.

ರಸ್ತೆಯಲ್ಲಿ ಪೈಪ್ ಲೈನ್ ಕಾಮಗಾರಿಗೆ ಎರಡೆರಡು ಗುಂಡಿಗಳು ತೆಗದು ವರ್ಷವಾಗಿದೆ. ಆದರೆ ಇವುಗಳಿಗೆ ಡಾಂಬರ್ ಭಾಗ್ಯವನ್ನು ಅಧಿಕಾರಿಗಳು ಇಲ್ಲಿವರೆಗೂ ಕಲ್ಪಿಸಿಲ್ಲ. ಇದೇ ಕಾರಣಕ್ಕೆ ಗುಂಡಿಯಲ್ಲಿ ಆಯತಪ್ಪಿ ಬಿದ್ದ ಪರಿಣಾಮ, ಶರ್ಮಿಳಾ ಮೇಲೆ ಬೊಲೆರೊ ಗೂಡ್ಸ್ ಗಾಡಿ ಹರಿದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನು ರಸ್ತೆಯಲ್ಲಿ ಗುಂಡಿ ಬಿದಿದ್ದನ್ನ ಹಾಗೇ ಬಿಟ್ಟಿರೋದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌

Edited By : Shivu K
PublicNext

PublicNext

30/01/2022 02:17 pm

Cinque Terre

42.92 K

Cinque Terre

1

ಸಂಬಂಧಿತ ಸುದ್ದಿ