ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಂಚಕ್ಕಾಗಿ ಸಹೋದರರ ಜಗಳ; ಮಧ್ಯಸ್ಥಿಕೆಗೆ ಬಂದವನ ಕೊಲೆಯಲ್ಲಿ ಅಂತ್ಯ!

ಬೆಂಗಳೂರು: ಮನೆಯಲ್ಲಿನ ಸಣ್ಣಪುಟ್ಟ ಜಗಳ ಯಾವ ಮಟ್ಟಿಗೆ ಬೇಕಾದ್ರೂ ಹೋಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಗ್ಸಾಂಪಲ್! ಮನೆಯಲ್ಲಿ ರಾತ್ರಿ ಮಂಚದ ಮೇಲೆ ಮಲಗೋ ವಿಚಾರಕ್ಕೆ ಅಣ್ಣ- ತಮ್ಮನ ನಡುವೆ ಗಲಾಟೆ ಶುರುವಾಗಿದೆ. ಈ ಜಗಳ ನೋಡ ನೋಡ್ತಿದ್ದಂತೆಯೇ ಜೋರಾಗಿ ಹೋಗಿದೆ.

ಗಲಾಟೆ ಜೋರಾದ ಹಿನ್ನೆಲೆಯಲ್ಲಿ ಅಣ್ಣ-ತಮ್ಮನ ಗಲಾಟೆ ಬಿಡಿಸೋಕೆ ಪಕ್ಕದ ಮನೆಯಲ್ಲಿದ್ದ ದೊಡ್ಡಮ್ಮನ ಮಗ ಬಂದಿದ್ದು, ಇವರ ಜಗಳದಲ್ಲಿ ಆತ ತನ್ನ ಪ್ರಾಣವನ್ನೇ ಬಿಟ್ಟಿದ್ದಾನೆ! 21 ವರ್ಷದ ವೆಂಕಟೇಶ್ ಕೊಲೆಯಾದ ಯುವಕನಾಗಿದ್ದು, ಜೀವನ್ ಭೀಮಾನಗರ ಹನುಮನಗರದಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ.

ಮನು ಮತ್ತು ವಿನಯ್ ಇಬ್ಬರ ನಡುವೆ ಮಂಚದ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಈ ವೇಳೆ ವೆಂಕಟೇಶ್ ಮಧ್ಯೆ ಬಂದು ಬುದ್ಧಿ ಹೇಳುವಾಗ, ಕೋಪಗೊಂಡ ವಿನಯ್ ಗ್ಲಾಸ್ ಪೀಸ್ ನಿಂದ ವೆಂಕಟೇಶ್ ನ ಎದೆಗೆ ಇರಿದಿದ್ದಾನೆ. ಹೃದಯಕ್ಕೇ ಗ್ಲಾಸ್ ಇರಿತವಾದ ಪರಿಣಾಮ ಜಿಮ್ ಟ್ರೈನರ್ ಆಗಿದ್ದ ವೆಂಕಟೇಶ್ ಮೃತನಾಗಿದ್ದಾನೆ. ಕೊಲೆ ಸಂಬಂಧ ಪೊಲೀಸ್ರು, ವಿನಯ್ ಮತ್ತು ಆತನ ಸ್ನೇಹಿತ ಮೋಹನ್ ನನ್ನು ಬಂಧಿಸಿದ್ದಾರೆ.

Edited By : Shivu K
Kshetra Samachara

Kshetra Samachara

29/01/2022 08:38 pm

Cinque Terre

758

Cinque Terre

0

ಸಂಬಂಧಿತ ಸುದ್ದಿ