ಬೆಂಗಳೂರು: ರಾತ್ರೋ ರಾತ್ರಿ ಅಪಾರ್ಟ್ಮೆಂಟ್ ನುಗ್ಗಿದ ನಾಲ್ವರು ಕಳ್ಳರನ್ನು ಅಪಾರ್ಟ್ಮೆಂಟ್ ಸೆಕ್ಯೂರಿಟಿ ಬೆನ್ನತ್ತಿ ಹಿಡಿದು ಶೌರ್ಯ ಪ್ರದರ್ಶಿಸಿದ್ದಾರೆ. ನಾಲ್ವರು ಕಳ್ಳರ ಪೈಕಿ ಒಬ್ಬನನ್ನ ಹಿಡಿದು ಮೂವರು ಖದೀಮರನ್ನ ಹಿಮ್ಮೆಟ್ಟಿದ ಸೆಕ್ಯುರಿಟಿ ಗಾರ್ಡ್ಸ್ ಕಾರ್ಯ ಕ್ಕೆ ಇಡೀ ಅಪಾರ್ಟ್ಮೆಂಟ್ ಜನ ಅಭಿನಂದಿಸಿದ್ದಾರೆ.
ಇಮ್ಮಡಿಹಳ್ಳಿಯ ಸಾನ್ವಿ ಅಪಾರ್ಮೆಂಟಿನಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಶೂ ಕಳ್ಳತನಕ್ಕೆ ಕಳ್ಳರು ಮಾರಕಾಸ್ತ್ರ ಸಹಿತ ಬಂದಿದ್ರು.
ಸೆಕ್ಯುರಿಟಿ ಗಾರ್ಡ್ ಜಗತ್ ಬೋರಾ ಹಾಗೂ ವಿಜಯ್ ಬೋರಾ ಆ ಸಮಯದಲ್ಲಿ ಡ್ಯೂಟಿಯಲ್ಲಿದ್ರು.ಕಳ್ಳರನ್ನು ಕಂಡ ಕೂಡಲೇ ಅವರ ಬೆನ್ನತ್ತಿ ಒಬ್ಬನ್ನು ಹಿಡಿದು ವೈಟ್ ಫೀಲ್ಡ್ ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ಸ್ ತೋರಿದ ಧೈರ್ಯಕ್ಕೆ ವೈಟ್ ಫೀಲ್ಡ್ ಡಿಸಿಪಿ ಎಸ್.ಗಿರೀಶ್ ಮತ್ತು ಇನ್ಸ್ಪೆಕ್ಟರ್ ಶಾಂತರಾಮ ಅಭಿನಂದಿಸಿದ್ದಾರೆ.
PublicNext
29/01/2022 05:11 pm